ಗೃಹಪ್ರವೇಶಲ್ಲಿ ವಿದ್ಯುತ್ ಪ್ರವಹಿಸಿ ಸಾವು

7

ಗೃಹಪ್ರವೇಶಲ್ಲಿ ವಿದ್ಯುತ್ ಪ್ರವಹಿಸಿ ಸಾವು

Published:
Updated:

ಬೆಂಗಳೂರು: ಗೃಹಪ್ರವೇಶ ಸಮಾರಂಭದಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಮಹದೇವಸ್ವಾಮಿ (19) ಎಂಬಾತ ಮೃತಪಟ್ಟಿದ್ದಾನೆ.

ಕೆಂಗೇರಿಯ ಮುನಿಕಾಳಪ್ಪ ತೋಟದಲ್ಲಿ ಮನೆ ಕಟ್ಟಿಸಿರುವ ಶ್ರೀಧರ್ ಎಂಬುವರು, ಶುಕ್ರವಾರ ಗೃಹಪ್ರವೇಶ ಕಾರ್ಯಕ್ರಮ ನಿಗದಿ ಮಾಡಿದ್ದರು. ಅಡುಗೆ ಮಾಡಲು ಮಳವಳ್ಳಿ ತಾಲ್ಲೂಕು ಬಿ.ಜಿ.ಪುರದಿಂದ ಆರು ಮಂದಿಯನ್ನು ಕರೆಸಿದ್ದ ಅವರು, ಮನೆ ಮುಂಭಾಗದಲ್ಲೇ ಶಾಮಿಯಾನ ಹಾಕಿಸಿ ಅಡುಗೆ ತಯಾರಿಗೆ ವ್ಯವಸ್ಥೆ ಮಾಡಿಕೊಟ್ಟಿದ್ದರು.

ಮನೆಯ ಮೀಟರ್ ಬೋರ್ಡ್‌ನಿಂದ ವೈರ್ ಎಳೆದು, ಶಾಮಿಯಾನದ ಸುತ್ತಲೂ ಫೋಕಸ್ ಲೈಟ್‌ಗಳನ್ನು ಹಾಕಲಾಗಿತ್ತು. ಅದು ಹಳೆ ವೈರ್ ಆಗಿದ್ದರಿಂದ ಅಲ್ಲಲ್ಲಿ ತಂತಿ ಆಚೆ ಬಂದಿತ್ತು. ಶಾಮಿಯಾನಕ್ಕೆ ಆಧಾರವಾಗಿ ಹಾಕಲಾಗಿದ್ದ ಕಬ್ಬಿಣದ ಪೈಪ್‌ಗೆ ಆ ವೈರ್ ಸುತ್ತಿದ್ದರಿಂದ ವಿದ್ಯುತ್ ಹರಿದಿದೆ.

ಶುಕ್ರವಾರ ನಸುಕಿನ ವೇಳೆ (5.45ಕ್ಕೆ) ಅಡುಗೆ ಮಾಡುತ್ತಿದ್ದಾಗ ಆ ಪೈಪ್ ಮುಟ್ಟಿದ್ದ ಮಹದೇವಸ್ವಾಮಿ, ಚೀರಿಕೊಂಡು ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಮಾರ್ಗಮಧ್ಯೆಯೇ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

‘ಶ್ರೀಧರ್, ಎಲೆಕ್ಟ್ರೀಷಯನ್ ಸುರೇಶ್ ಹಾಗೂ ಶಾಮಿಯಾನದ ಮಾಲೀಕ ಮಂಜುನಾಥ್ ಅವರ ಬೇಜವಾಬ್ದಾರಿಯಿಂದ ಈ ದುರ್ಘಟನೆ ಸಂಭವಿಸಿದೆ. ಮೃತನ ತಾಯಿ ಗೌರಮ್ಮ ದೂರು ಕೊಟ್ಟಿದ್ದು, ನಿರ್ಲಕ್ಷ್ಯದಿಂದ ಸಾವು (ಐಪಿಸಿ 304ಎ) ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !