ಗಂಗಾಧರ ಸ್ವಾಮಿಗೆ ಜೀವಮಾನ ಪ್ರಶಸ್ತಿ

7

ಗಂಗಾಧರ ಸ್ವಾಮಿಗೆ ಜೀವಮಾನ ಪ್ರಶಸ್ತಿ

Published:
Updated:
Deccan Herald

ಬೆಂಗಳೂರು: ನಾಟಕ ಅಕಾಡೆಮಿಯ 2018–19ನೇ ಸಾಲಿನ ಜೀವಮಾನದ ಸಾಧನೆ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಪಿ.ಗಂಗಾಧರಸ್ವಾಮಿ ಪಾತ್ರರಾಗಿದ್ದಾರೆ. 

ಮೈಸೂರು ರಂಗಾಯಣ ಕಟ್ಟಲು ಬಿ.ವಿ.ಕಾರಂತರ ಜತೆ ಶ್ರಮಿಸಿದ ಹಾಗೂ ನೂರಾರು ರಂಗಕರ್ಮಿಗಳನ್ನು ಈ ಕ್ಷೇತ್ರಕ್ಕೆ ಪರಿಚಯಿಸಿದ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್‌ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 
ಈ ಪ್ರಶಸ್ತಿ ₹ 50 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ. 

‘ಪ್ರಸಕ್ತ ಸಾಲಿನಲ್ಲಿ 25 ಮಂದಿಗೆ ವಾರ್ಷಿಕ ರಂಗ ಪ್ರಶಸ್ತಿ, 4 ಅಕಾಡೆಮಿಯ ದತ್ತಿ ‍ಪ್ರಶಸ್ತಿ ನೀಡಲಾಗುತ್ತಿದೆ. ವಾರ್ಷಿಕ ಪ್ರಶಸ್ತಿಯು ₹ 25 ಸಾವಿರ ನಗದು, ಅಕಾಡೆಮಿಯ ದತ್ತಿ ಪ್ರಶಸ್ತಿಯು ₹ 5 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿದೆ’ ಎಂದು ಅವರು ಹೇಳಿದರು.

ಪ್ರಶಸ್ತಿ ಪ್ರದಾನ ಸಮಾರಂಭ ಮುಂದಿನ ವರ್ಷ ಫೆಬ್ರುವರಿಯಲ್ಲಿ ಉಡುಪಿಯಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. 

ಬಾಕ್ಸ್‌

ವಾರ್ಷಿಕ ರಂಗ ಪ್ರಶಸ್ತಿ ಪುರಸ್ಕೃತರು

ಕ್ರಮ ಸಂಖ್ಯೆ; ಹೆಸರು; ಸ್ಥಳ; ಪ್ರಕಾರ

1; ಉಗಮ ಶ್ರೀನಿವಾಸ; ಬೆಂಗಳೂರು; ಹವ್ಯಾಸಿ ರಂಗಭೂಮಿ, ರಂಗ ಸಂಘಟಕ, ವಿಮರ್ಶೆ

2; ಡಿ.ಎಲ್‌.ನಂಜುಂಡಸ್ವಾಮಿ; ತುಮಕೂರು; ಗ್ರಾಮೀಣ ರಂಗಭೂಮಿ, ರಂಗ ಸಂಗೀತ

3; ಜಕಾವುಲ್ಲಾ; ಹಾಸನ; ನಟ; ವೃತ್ತಿ ರಂಗಭೂಮಿ

4; ಪ್ರಭಾಕರ ಜೋಷಿ; ಕಲಬುರ್ಗಿ; ನಟ, ನಿರ್ದೇಶಕ, ಸಂಘಟಕ, ಸಾಹಿತ್ಯ, ಹವ್ಯಾಸಿ ರಂಗಭೂಮಿ‌

5; ವಿಜಯಾನಂದ ಕರಡಿಗುಡ್ಡ; ರಾಯಚೂರು; ವೃತ್ತಿ ರಂಗಭೂಮಿ ನಟ

6; ಖಾಜೇಸಾಬ ಜಂಗಿ; ಬಾಗಲಕೋಟೆ; ವೃತ್ತಿ ರಂಗಭೂಮಿ ನಟ 

7; ಬಸಪ್ಪ ಮದರಿ; ವಿಜಯಪುರ; ವೃತ್ತಿ ರಂಗಭೂಮಿ ನಟ

8; ಎಂ.ರವಿ; ಬೆಂಗಳೂರು; ನೇಪಥ್ಯ, ನಟ, ನಿರ್ದೇಶಕ

9; ಜಗದೀಶ್‌ ಕೆಂಗನಾಳ; ಬೆಂಗಳೂರು ಗ್ರಾಮಾಂತರ; ನಟ, ಹವ್ಯಾಸಿ ರಂಗಭೂಮಿ, ಸಂಘಟಕ

10; ಕಿರಗಸೂರು ರಾಜಪ್ಪ; ಚಾಮರಾಜನಗರ; ರಂಗಸಂಗೀತ, ನಿರ್ದೇಶಕ, ಗ್ರಾಮೀಣ ರಂಗಭೂಮಿ

11; ಟಿ.ಪ್ರಭಾಕರ ಕಲ್ಯಾಣಿ; ಉಡುಪಿ; ನಟ, ಸಂಘಟಕ, ಹವ್ಯಾಸಿ ರಂಗಭೂಮಿ

12; ಎಸ್‌.ಆಂಜಿನಮ್ಮ; ಬಳ್ಳಾರಿ; ನಟಿ

13; ಸಾವಿತ್ರಿ ನಾರಾಯಣಪ್ಪ ಗೌಡರ; ಗದಗ; ನಟಿ, ವೃತ್ತಿರಂಗಭೂಮಿ

14; ಮಕಮ್ಮಲ್‌ ಹುಣಸಿಕಟ್ಟಿ; ಬೆಳಗಾವಿ; ನಟ, ನಿರ್ದೇಶಕ, ಸಂಘಟಕ

15; ಹನುಮಂತಪ್ಪ ಬಾಗಲಕೋಟೆ; ಚಿತ್ರದುರ್ಗ; ವೃತ್ತಿರಂಗಭೂಮಿ ನಟ

16; ಡಾ.ಕೆ.ವೈ.ನಾರಾಯಣಸ್ವಾಮಿ; ಕೋಲಾರ; ನಾಟಕಕಾರ

17; ಉಷಾ ಭಂಡಾರಿ; ದಕ್ಷಿಣ ಕನ್ನಡ; ನಟಿ, ನಿರ್ದೇಶಕಿ ಹವ್ಯಾಸಿ ರಂಗಭೂಮಿ

18; ಡಿ.ಎಂ.ರಾಜಕುಮಾರ್‌; ಶಿವಮೊಗ್ಗ; ನಟ, ಹವ್ಯಾಸಿ ರಂಗಭೂಮಿ

19; ಆಂಜಿನಪ್ಪ; ದೊಡ್ಡಬಳ್ಳಾಪುರ; ನಟ, ಹವ್ಯಾಸಿ ರಂಗಭೂಮಿ

20; ಹುಲಿವಾನ ಗಂಗಾಧರಯ್ಯ; ತುಮಕೂರು; ನಟ, ಸಂಘಟಕ

21; ಮೋಹನ್‌ ಮಾರ್ನಾಡು; ಮುಂಬೈ; ನಟ, ಸಂಘಟಕ

22; ಬಿ.ಕೆಂಚೇಗೌಡ; ಮಂಡ್ಯ; ನಟ, ಗ್ರಾಮೀಣ ಪೌರಾಣಿಕ ರಂಗಭೂಮಿ

23; ಮೈಮ್‌ ರಮೇಶ್‌; ಮೈಸೂರು; ರಂಗಸಂಘಟಕ, ನಟ, ನಿರ್ದೇಶಕ

24; ಚಿಂದೋಡಿ ಚಂದ್ರಧರ; ದಾವಣಗೆರೆ; ವೃತ್ತಿರಂಗಭೂಮಿ ನಟ; ಕಂಪನಿ ಮಾಲೀಕ

25; ಈಶ್ವರದಲಾ; ತುಮಕೂರು; ನಟ, ಹವ್ಯಾಸಿ ರಂಗಭೂಮಿ

***

ಕಲ್ಚರ್ಡ್‌ ಕಮೆಡಿಯನ್‌ ಕೆ.ಹಿರಣ್ಣಯ್ಯ ದತ್ತಿ ಪ್ರಶಸ್ತಿ

ನಿಕೋಲಸ್‌; ಹಾಸನ; ನಟ, ನಿರ್ದೇಶಕ, ಹವ್ಯಾಸಿ ರಂಗಭೂಮಿ

ನಟರತ್ನ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರ

ಮೃತ್ಯುಂಜಯ ಸ್ವಾಮಿ ಹಿರೇಮಠ; ಶಿವಮೊಗ್ಗ;  ವೃತ್ತಿರಂಗಭೂಮಿ ನಟ

ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ

ಎಂ.ಎಸ್‌.ಮಾಳವಾಡ; ಧಾರವಾಡ; ನಿರ್ದೇಶಕ, ವೃತ್ತಿರಂಗಭೂಮಿ, ನಾಟಕಕಾರ, ಸಂಘಟಕ

ಕೆ.ರಾಮಚಂದ್ರಯ್ಯ; ದತ್ತಿನಿಧಿ ಪುರಸ್ಕಾರ

ನ.ಲಿ.ನಾಗರಾಜ್‌; ರಾಮನಗರ; ಹವ್ಯಾಸಿ ರಂಗಭೂಮಿ ನಟ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !