ಆತ್ಮವಿಶ್ವಾಸದಿಂದ ಫಲಿತಾಂಶ ಉತ್ತಮ

7
ಎಸ್ಸೆಸ್ಸೆಲ್ಸಿ ಪರೀಕ್ಷೆ ಕಾರ್ಯಾಗಾರ

ಆತ್ಮವಿಶ್ವಾಸದಿಂದ ಫಲಿತಾಂಶ ಉತ್ತಮ

Published:
Updated:
Deccan Herald

ಕೋಲಾರ: ‘ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಿದಾಗ ಮಾತ್ರ ಉತ್ತಮ ಫಲಿತಾಂಶಗಳಿಸಲು ಸಾಧ್ಯ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ರತ್ನಯ್ಯ ಅಭಿಪ್ರಾಯಪಟ್ಟರು.

ಶಿಕ್ಷಣ ಇಲಾಖೆಯಿಂದ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಉದಾಸೀನ ಬೇಡ, ಇಷ್ಟಪಟ್ಟು ಕಲಿಯುವವರಿಗೆ ಪರೀಕ್ಷೆ ಕಷ್ಟವಾಗದು, ನಿಮ್ಮ ಭವಿಷ್ಯದ ಬದುಕು ರೂಪಿಸಿಕೊಳ್ಳಲು ಇಂದೊಂದು ಅವಕಾಶ’ ಎಂದು ಹೇಳಿದರು.

‘ಪೋಷಕರು ಕೂಲಿ ಮಾಡಿದರೂ ತಮ್ಮ ಮಕ್ಕಳು ಉನ್ನತ ವಿದ್ಯಾಭ್ಯಾಸ ಮಾಡಲಿ ಎಂದು ಶಾಲೆಗೆ ಕಳುಹಿಸಿದ್ದಾರೆ, ಅವರ ಆಶಯಗಳು, ಕಷ್ಟಗಳ ಬಗ್ಗೆ ಯೋಚಿಸಿ, ಸಾಧನೆಗೆ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

‘ಏಕಾಗ್ರತೆಯಿಂದ ಕಲಿಕೆಗೆ ಮುಂದದಾಗ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಹಾರಿಯಾಗುತ್ತದೆ. ಪಠಣ, ಮನನ, ಗಹನ ವಿದ್ಯಾರ್ಥಿ ಜೀವನದಲ್ಲಿ ಅತ್ಯಗತ್ಯ, ನಿಮ್ಮ ಆಲೋಚನೆ ಕೇವಲ ಕಲಿಕೆಯ ಕಡೆಯೇ ಇರಬೇಕು’ ಎಂದು ತಿಳಿಸಿದರು.

‘ಮಾ.21 ರಿಂದ ಪರೀಕ್ಷೆ ಆರಂಭಗೊಳ್ಳುತ್ತಿದೆ, ಬಾಕಿ ಉಳಿದಿರುವ ಅವಧಿಯಲ್ಲಿ ಕಲಿಕೆಯನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ಜೀವನದಲ್ಲಿ ಕಷ್ಟಗಳಿಗೆ ಗುರಿಯಾಗುತ್ತೀರಿ’ ಎಂದು ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಎಚ್ಚರಿಸಿದರು.

‘ಪರೀಕ್ಷೆ ಸಮೀಪಿಸುತ್ತಿದಂತೆ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇದರ ಕಡೆ ಪೋಷಕರು ಹೆಚ್ಚು ಗಮನ ಹರಿಸಬೇಕು. ನಿರಂತರವಾಗಿ ಅಭ್ಯಾಸ ಮಾಡಿ. ಆತ್ಮವಿಶ್ವಾಸ ತಾನಾಗಿಯೇ ಬರುತ್ತದೆ. ಫಲಿತಾಂಶವನ್ನು ಉತ್ತಮ ಪಡಿಸಲು ಇಲಾಖೆ ಇಡುವ ಮಾರ್ಗದರ್ಶನವನ್ನು ಶಿಕ್ಷಕರು ಪಾಲಿಸಬೇಕು’ ಎಂದು ಸೂಚಿಸಿದರು.

‘ಎಸ್ಸೆಸ್ಸೆಲ್ಸಿ ನಿಮ್ಮ ಮುಂದಿನ ಬದುಕಿನ ಹಾದಿಯನ್ನು ನಿರ್ಧರಿಸುತ್ತದೆ. ಯಾವ ರೀತಿಯ ಉನ್ನತ ಶಿಕ್ಷಣದತ್ತ ಸಾಗಬಹುದು ಎಂಬುದರ ಮಾರ್ಗದರ್ಶನಕ್ಕೆ ಅಡಿಪಾಯವಾಗಿದೆ’ ಎಂದು ಹೇಳಿದರು.

ಖಾಸಗಿ ಶಾಲೆಗಳ ಸಂಘದ ತಾಲ್ಲೂಕು ಅಧ್ಯಕ್ಷ ನಾಗಭೂಷಣ್, ವ್ಯಾಲಿ ಪಬ್ಲಿಕ್ ಶಾಲೆಯ ಮುಖ್ಯಸ್ಥರಾದ ಗೋಪಾಲರೆಡ್ಡಿ, ಸುಮಾ, ವಿಷಯ ಪರಿವೀಕ್ಷಕಿ ಗಾಯತ್ರಿ, ಮುಖ್ಯ ಶಿಕ್ಷಕರಾದ ಪ್ರದೀಪ್ ಕುಮಾರ್, ಮಲ್ಲಿಕಾರ್ಜುನಾಚಾರಿ, ಪ್ರಸನ್ನಕುಮರ್, ಬ್ರಹ್ಮಾಚಾರಿ, ಶಿವಪ್ರಸಾದ್ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !