ತಂತ್ರಜ್ಞಾನಿಗಳ ಪ್ರೋತ್ಸಾಹಕ್ಕೆ ಇಸ್ರೊ ಸನ್ನದ್ಧ: ನಿವೃತ್ತ ವಿಜ್ಞಾನಿ ಡಾ.ಸಿ.ಡಿ.

7
19ರಂದು ಉಪಗ್ರಹ ಉಡಾವಣೆ ವೀಕ್ಷಿಸಿ

ತಂತ್ರಜ್ಞಾನಿಗಳ ಪ್ರೋತ್ಸಾಹಕ್ಕೆ ಇಸ್ರೊ ಸನ್ನದ್ಧ: ನಿವೃತ್ತ ವಿಜ್ಞಾನಿ ಡಾ.ಸಿ.ಡಿ.

Published:
Updated:

ಕಲಬುರ್ಗಿ: ‘ಭಾರತದ ಪ್ರಗತಿ ವೇಗಕ್ಕೆ ತಕ್ಕಷ್ಟು ವಿಜ್ಞಾನಿಗಳು ಹಾಗೂ ತಂತ್ರಜ್ಞಾನಿಗಳ ಸಂಖ್ಯೆ ಬೆಳೆಯುತ್ತಿಲ್ಲ. ಈ ಕೊರತೆ ನೀಗಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ವಿದ್ಯಾರ್ಥಿಗಳಿಗೂ ಸಂಶೋಧನಾ ಅವಕಾಶ ನೀಡುತ್ತಿದೆ’ ಎಂದು ಇಸ್ರೊ ನಿವೃತ್ತ ವಿಜ್ಞಾನಿ ಡಾ.ಸಿ.ಡಿ. ಪ್ರಸಾದ್‌ ತಿಳಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಇಲ್ಲಿ ಆಯೋಜಿಸಿದ 26ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾನುವಾರ ‘ಬಾಹ್ಯಾಕಾಶ ಸಂಶೋಧನೆಗಳು’ ಕುರಿತು ಮಾತನಾಡಿದ ಅವರು, ‘ವಿಜ್ಞಾನ ವಿಭಾಗ ಆಯ್ದುಕೊಳ್ಳುವ ವಿದ್ಯಾರ್ಥಿಗಳು ಸೀಮಿತ ಗುರಿ ಹೊಂದಬಾರದು. ಲಕ್ಷಾಂತರ ರೂಪಾಯಿ ಸಂಬಳ ಪಡೆದರೆ ಸಾಕು ಎನ್ನುವ ಮನೋಭಾವ ಬೇಡ. ಈ ಕ್ಷೇತ್ರದ ಅಪರಿಮಿತ ಅವಕಾಶಗಳನ್ನೂ ಬಾಚಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ವಿದ್ಯಾರ್ಥಿಗಳು ಬೆಂಗಳೂರಿನ ಇಸ್ರೊ ಕಚೇರಿಗೆ ಹಾಗೂ ಶ್ರೀಹರಿಕೋಟಾದ ಉಡಾವಣೆ ಕೇಂದ್ರಕ್ಕೆ ಭೇಟಿ ನೀಡಿ, ನೇರ ಮಾಹಿತಿ ಪಡೆಯಲು ಅವಕಾಶವಿದೆ’ ಎಂದರು.

‘ಭಾರತ ಈವರೆಗೆ ಪಿಎಸ್‌ಎಲ್‌ವಿ– 46 ಉಪಗ್ರಹಗಳನ್ನು ಉಡಾವಣೆ ಮಾಡಿದ್ದು, ಎಲ್ಲವೂ ನೂರಕ್ಕೆ ನೂರರಷ್ಟು ಯಶಸ್ವಿಯಾಗಿವೆ. ಇದೇ ಡಿ. 19ರಂದು ‘ಜಿಎಸ್‌ಎಲ್‌ವಿ’ ಉಪಗ್ರಹ ಉಡಾವಣೆ ಮಾಡಲಾಗುತ್ತಿದ್ದು, ಪ್ರತಿಯೊಬ್ಬರೂ ಇದರ ನೇರ ಪ್ರಸಾರವನ್ನು ಕಣ್ತುಂಬಿಕೊಳ್ಳಬಹುದು’ ಎಂದು ಸಲಹೆ ನೀಡಿದರು.

ಪರಿಷತ್‌ನ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಅಶೋಕ ಜೀವಣಗಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಚಂದ್ರಕಾಂತ ಕ್ಷೀರಸಾಗರ, ಡಾ.ಬಿ.ಎಸ್‌. ಮಾಕಲ್‌ ವೇದಿಕೆ ಮೇಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !