ಭಕ್ತನ ಆರಾಧನೆಯಿಂದ ಜೀವನ ನೆಮ್ಮದಿ

7

ಭಕ್ತನ ಆರಾಧನೆಯಿಂದ ಜೀವನ ನೆಮ್ಮದಿ

Published:
Updated:
Deccan Herald

ಕೋಲಾರ: ‘ಭಕ್ತನ ಆರಾಧನೆ ಮಾಡುವುದರಿಂದ ನೆಮ್ಮದಿಯ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ’ ಎಂದು ಉತ್ತರ ಕನ್ನಡ ಜಿಲ್ಲೆಯ ಶಿರಳಗಿ ಚೈತನ್ಯ ರಾಜಾರಾಮ ಕ್ಷೇತ್ರದ ಮುಖ್ಯಸ್ಥ ಆಚಾರ್ಯ ಸುಧರ್ಮ ಚೈತನ್ಯ ತಿಳಿಸಿದರು.

ನಗರದ ಶಂಕರ ಮಠ ಶಾರದಾಂಬ ದೇವಾಲಯದಲ್ಲಿ ಭಾನುವಾರ ನಡೆದ ಧಾತ್ರೀ ಹೋಮದ ಹಾಗೂ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಮನುಷ್ಯ ಸಣ್ಣಪುಟ್ಟ ವಿಚಾರಿಗಳಿಗೆಲ್ಲಾ ತಲೆಕೆಡಿಸಿಕೊಂಡು ಒತ್ತಡಗಳಿಗೆ ಒಳಗಾಗುತ್ತಿದ್ದಾನೆ. ಇದರಿಂದ ನೆಮ್ಮದಿಯಿಲ್ಲದೆ ಖಿನ್ನತೆ ಒಳಗಾಗಿ ಅನಾಹುತಗಳಿಗೆ ತುತ್ತಾಗುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಮನದ ದೋಷಗಳು ನಿವಾರಣೆಯಾಗಿ ಮನಸ್ಸಿಗೆ ನೆಮ್ಮದಿ ಕಂಡುಕೊಳ್ಳಲು ಭಜನೆ, ಪೂಜೆ, ಯಜ್ಞ, ಯಾಗ, ಪ್ರವಚನಗಳು ಸಾಧನಗಳಾಗಿವೆ. ಎಷ್ಟೇ ಕೆಲಸದ ಒತ್ತಡವಿದ್ದರೂ ಭಕ್ತನ ಆರಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಒತ್ತಡದ ಜೀವನದಲ್ಲಿ ಮನುಷ್ಯನಿಗೆ ಮನಶಾಂತಿ ಇಲ್ಲವಾಗಿದೆ. ಹಿಂದಿನ ಕಾಲದಲ್ಲಿ ಸಂಜೆ ವೇಳೆ ಮನೆಮನೆಯಲ್ಲೂ ಭಜನೆ ನಡೆಯುತ್ತಿತ್ತು. ಇಂದು ಭಜನೆ ಮಾಯವಾಗಿ ಟಿವಿ ಬೇತಾಳ ಕಾಡುತ್ತಿದೆ. ಮೊಬೈಲ್‌ಗಳು ಪುಸ್ತಕ ಓದುವ ಅಭಿರುಚಿಯನ್ನು ಕೊಲ್ಲುತ್ತಿದೆ’ ಎಂದು ಹೇಳಿದರು.

ಶತಶ್ಲೋಕಿ ರಾಮಾಯಣ ಪಾರಾಯಣ ಅಭಿಯಾನದ ರುವಾರಿ ದಿಲೀಪ್ ಬೆಳ್ಳಾವೆ ಮಾತನಾಡಿ, ‘ರಾಮಾಯಣದಲ್ಲಿ 24,000 ಶ್ಲೋಕಗಳನ್ನು ಕೇವಲ 100 ಶ್ಲೋಕಗಳಲ್ಲಿ ಶತಶ್ಲೋಕಿ ರಾಮಾಯಣ ಕಟ್ಟಿಕೊಟ್ಟಿದೆ. ರಾಜ್ಯದ 12 ಜಿಲ್ಲೆಗಳಲ್ಲಿ 2,000 ಮಂದಿ ಇದರ ಪಾರಾಯಣದಲ್ಲಿ ನಿರತರಾಗಿದ್ದಾರೆ’ ಎಂದು ವಿವರಿಸಿದರು.

ಶಂಕರ ಸೇವಾ ಟ್ರಸ್ಟ್‌ ಅಧ್ಯಕ್ಷ ಕಾರ್ತಿಕ್ ಕೃಷ್ಣಮೂರ್ತಿ, ಕಾರ್ಯದರ್ಶಿ ರಾಮಕೃಷ್ಣ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !