ವೃತ್ತಿ ಜೀವನದಲ್ಲಿ ಕ್ರೀಡೆ ಮುಂದುವರೆಸಿ: ಐಜಿಪಿ ಬಿ.ದಯಾನಂದ್

7

ವೃತ್ತಿ ಜೀವನದಲ್ಲಿ ಕ್ರೀಡೆ ಮುಂದುವರೆಸಿ: ಐಜಿಪಿ ಬಿ.ದಯಾನಂದ್

Published:
Updated:
Deccan Herald

ಕೋಲಾರ: ‘ವೃತ್ತಿ ಜೀವನದಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯವಂತರಾಗಿರಲು ಸಹಕಾರಿಯಾಗುತ್ತದೆ’ ಎಂದು ಕೇಂದ್ರ ವಲಯ ಐಜಿಪಿ ಬಿ.ದಯಾನಂದ್ ತಿಳಿಸಿದರು.

ನಗರದಲ್ಲಿ ಪೊಲೀಸ್‌ ಇಲಾಖೆಯಿಂದ ಭಾನುವಾರ ನಡೆದ ವಾರ್ಷೀಕ ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ‘ಪೊಲೀಸರು ಕ್ರೀಡೆಯನ್ನು ಕೇವಲ ಪ್ರತಿಭೆ, ಬಹುಮಾನಕ್ಕೆ ಸಿಮೀತಗೊಳಿಸಿಕೊಳ್ಳದೆ ನಿರಂತರ ಅಭ್ಯಾಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಗೆದ್ದಿರುವ ಪೊಲೀಸರು ಹಾಗೂ ಅಧಿಕಾರಿಗಳು ಶಿಸ್ತು, ಘನತೆ ಹೆಚ್ಚಿಸಿಕೊಂಡು ವೃತ್ತಿ ನೈಪುಣ್ಯತೆಯನ್ನು ಮೆರೆಯಬೇಕು’ ಎಂದು ಸೂಚಿಸಿದರು.

‘ಕ್ರೀಡಾಮನೋಭಾವ ವೃತ್ತಿ ಜೀವನದ ಜಂಜಾಟಕ್ಕೆ ಕೊನೆ ಮಾಡಬಾರದು. ನಿವೃತ್ತಿ ನಂತರವು ಮುಂದುವರೆಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಸ್ಪರ್ಧೆಗಳಲ್ಲಿ ಗೆದ್ದಿರುವ ಕ್ರೀಡಾಪಟುಗಳು ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬಹುಮಾನ ಗಳಿಸುವ ಮೂಲಕ ಕೋಲಾರ ಜಿಲ್ಲೆಯ ಹಿರಿಮೆಯನ್ನು ಎತ್ತಿ ಹಿಡಿಯುವಂತಾಗಬೇಕು’ ಎಂದು ಹೇಳಿದರು.

ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಪೊಲೀಸ್ ಠಾಣೆಯ ಪೊಲೀ್ ಶೃತಿ ಮತ್ತು ಮುಳಬಾಗಲು ಠಾಣೆಯ ಪೊಲೀಸ್ ಗಿರೀಶ್‍ಗೆ ವೈಯಕ್ತಿಕ ಚಾಂಪಿಯನ್‌ ಪಡೆದುಕೊಂಡರು.

ಡಿಎಆರ್ ತಂಡಕ್ಕೆ ಹಗ್ಗಜಗ್ಗಾಟದಲ್ಲಿ ಪ್ರಥಮ ಬಹುಮಾನ ಮತ್ತು ಕೋಲಾರ ನಗರಠಾಣೆಗೆ ಸಮಗ್ರ ಪ್ರಶಸ್ತಿ ಸಿಕ್ಕಿತು. 400 ಮೀ ಓಟ, 1,600 ಮೀ ಓಟ, ವಾಲಿಬಾಲ್, ಕಬಡ್ಡಿ ಸ್ಪರ್ಧೆಯಲ್ಲೂ ಡಿಎಆರ್ ತಂಡ ಪ್ರಥಮ ಸ್ಥಾನಪಡೆದುಕೊಂಡಿದೆ. ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಪೊಲೀಸರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಸಪೆಟ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಕುಮಾರ್, ಡಾ.ಶಶಿಕಲಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !