ನಿವೇಶನ ಇಲ್ಲದವರಿಗೆ ಮನೆ ನಿರ್ಮಾಣ: ರೂಪಾಲಿ 

7
ಜಿಲ್ಲಾ ಹರಿಕಂತ್ರ ಸಮಾಜದಿಂದ ಪ್ರತಿಭಾವಂತರಿಗೆ ಸನ್ಮಾನ

ನಿವೇಶನ ಇಲ್ಲದವರಿಗೆ ಮನೆ ನಿರ್ಮಾಣ: ರೂಪಾಲಿ 

Published:
Updated:
Deccan Herald

ಅಂಕೋಲಾ: ‘ಈ ಕ್ಷೇತ್ರದ ಹರಿಕಂತ್ರ ಮೀನುಗಾರ ಸಮುದಾಯದವರಿಗೆ ಮೀನುಗಾರಿಕೆ ಅನುಕೂಲಕ್ಕಾಗಿ ಸರ್ಕಾರದಿಂದ ಭೂಮಿ ಪಡೆದು ನಿವೇಶನ ಇಲ್ಲದವರಿಗೆ ಮನೆ ನಿರ್ಮಿಸಲು ಸ್ಥಳ ನೀಡಲು ಪ್ರಯತ್ನಿಸುತ್ತೇನೆ’ ಎಂದು ಕಾರವಾರ–ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ಜಿಲ್ಲಾ ಹರಿಕಂತ್ರ ಮಹಾಜನ ಸಂಘ, ತಾಲೂಕು ಹರಿಕಂತ್ರ ಮಹಾಜನ ಸಂಘದ ಆಶ್ರಯದಲ್ಲಿ ರವಿವಾರ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಮಾಜದ ಹಿರಿಯರಿಗೆ ಹಾಗೂ ಪ್ರತಿಭಾವಂತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಹರಿಕಂತ್ರ ಸಮುದಾಯದವರು ಕೂಡ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಅಧ್ಯಕ್ಷ ಗಣಪತಿ ಡಿ. ಉಳ್ವೇಕರ, ‘13 ವರ್ಷದಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಸಾಧಕರನ್ನು ಸನ್ಮಾನಿಸಿ ಉತ್ತೇಜನ ನೀಡುವ ಕಾರ್ಯ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಅದೇ ರೀತಿ ಪಾಲಕರು ಕೂಡ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಜಾತ ಗಾಂವಕರ, ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಸ್.ಕೆ. ಮೇಲಕಾರ, ಪುರಸಭೆ ಮುಖ್ಯಾಧಿಕಾರಿ ಎನ್.ಎಂ. ಮೇಸ್ತ, ಮೀನುಗಾರಿಕೆ ನಿಗಮ ಮಂಡಳಿಯ ಮಾಜಿ ರಾಜೇಂದ್ರ ನಾಯ್ಕ, ರಾಜು ತಾಂಡೇಲ್, ಜಿಲ್ಲಾ ಸಂಘದ ಸಂಸ್ಥಾಪಕ ಪಿ.ಎಂ.ತಾಂಡೇಲ್ ಮಾತನಾಡಿದರು.

ತಾಲ್ಲೂಕಿನ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ 187, ಪಿಯುಸಿಯಲ್ಲಿ 34, ವಿವಿಧ ಪದವಿಯ 28 ಸೇರಿದಂತೆ 249 ವಿದ್ಯಾರ್ಥಿಗಳಿಗೆ ನಗದು ಬಹುಮಾನದೊಂದಿಗೆ ಪಾರಿತೋಷಕ ವಿತರಿಸಿದರು. ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಹರಿಹರ ವಿ. ಹರಿಕಂತ್ರ ಹಿಲ್ಲೂರು, ವರದಿಗಾರ ವಿದ್ಯಾಧರ ಆರ್.ಮೊರಬಾ, ರಮೇಶ ಹನುಮಟ್ಟಿಕರ್, ರಾಮ ಹರಿಕಂತ್ರ ಶಿರೂರು, ಮಹಿಳಾ ಪಿ.ಎಸ್.ಐ. ಸುಧಾ ಹರಿಕಂತ್ರ ಮೊರಬಾ, ವೈದ್ಯಕೀಯ ಕ್ಷೇತ್ರದಿಂದ ದೀಶಾ ರಾಮ ಹರಿಕಂತ್ರ, ರಾಜಕೀಯ ಕ್ಷೇತ್ರದಿಂದ ರಾಜೇಶ ಮಾಜಾಳಿಕರ್, ಸುವಿಧಾ ಓಮು ಉಳ್ವೇಕರ್, ಸ್ನೇಹಾ ಚೇತನ ಹರಿಕಂತ್ರ, ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಸಂಸ್ಥಾಪಕ ಪಿ.ಎಂ.ತಾಂಡೇಲ್, ಶಾಸಕಿ ರೂಪಾಲಿ ಅವರನ್ನು ಸನ್ಮಾನಿಸಲಾಯಿತು.

ಕುಮಟಾ ತಾಲ್ಲೂಕು ಘಟಕದ ಅಧ್ಯಕ್ಷ ಜಗದೀಶ ಹರಿಕಂತ್ರ, ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಸ್. ಆಂದ್ಲೆಮನೆ, ಅಂಕೋಲಾ ಪುರಸಭೆ ಮುಖ್ಯಾಧಿಕಾರಿ ಎನ್.ಎಂ. ಮೇಸ್ತಾ, ಚಿತ್ತಾಕುಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜು ತಾಂಡೇಲ್, ಡಾ.ಪಿ.ಡಿ.ರಾಜು ಇದ್ದರು.

ಜಿಲ್ಲಾ ಹರಿಕಂತ್ರ ಮಹಾಜನ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಬಿ.ಹರಿಕಾಂತ ಸ್ವಾಗತಿಸಿದರು. ಶಿವಾನಂದ ತಾಂಡೇಲ್ ಪುರಸ್ಕಾರದ ಯಾದಿ ವಾಚಿಸಿದರು. ತೋಕು ಹರಿಕಾಂತ, ಮಂಜುನಾಥ ಮುದ್ಗೇಕರ್, ಶ್ರೀಕಾಂತ ದುರ್ಗೇಕರ ನಿರ್ವಹಿಸಿದರು. ಹೂವಾ ಖಂಡೇಕರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !