ಬ್ಯಾಂಕ್‌ಗೆ ವಂಚನೆ: ಎಫ್‌ಐಆರ್‌ ದಾಖಲು

7

ಬ್ಯಾಂಕ್‌ಗೆ ವಂಚನೆ: ಎಫ್‌ಐಆರ್‌ ದಾಖಲು

Published:
Updated:

ಮಂಗಳೂರು: ಕ್ರೀಡಾ ಸಾಮಗ್ರಿಗಳ ಮಾರಾಟ ಮಳಿಗೆ ತೆರೆಯಲು ಕಾರ್ಪೋರೇಶನ್‌ ಬ್ಯಾಂಕ್‌ನಿಂದ ₹ 50 ಲಕ್ಷ ಸಾಲ ಪಡೆದು ವಂಚಿಸಿರುವ ಸಂದೇಶ್‌ ಕಿಣಿ ಎಂಬುವವರ ವಿರುದ್ಧ ನಗರದ ಮಾದಕ ವಸ್ತು ಹಾಗೂ ಆರ್ಥಿಕ ಅಪರಾಧಗಳ ಪೊಲೀಸ್‌ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಾಗಿದೆ.

ನಗರದ ಗೋಕುಲ್‌ ಮಾರ್ಕೆಟ್‌ನಲ್ಲಿ ಕ್ರೀಡಾ ಸಾಮಗ್ರಿಗಳ ಮಾರಾಟ ಮಳಿಗೆ ತೆರೆಯಲು ಸಂದೇಶ್‌ ಕಾರ್ಪೋರೇಶನ್‌ ಬ್ಯಾಂಕ್‌ನ ಎ.ಬಿ.ಶೆಟ್ಟಿ ವೃತ್ತದ ಶಾಖೆಯಿಂದ ₹ 50 ಲಕ್ಷ ಸಾಲ ಪಡೆದಿದ್ದರು. ಈ ಬ್ಯಾಂಕ್‌ ಶಾಖೆಯ ಪ್ರಬಂಧಕರು ನೀಡಿದ ದೂರು ಆಧರಿಸಿ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಸಂದೇಶ್ ಕಿಣಿ 2015ರಲ್ಲಿ ₹ 50 ಲಕ್ಷ ಸಾಲವನ್ನು ಪಡೆದಿದ್ದರು. ಅದರಲ್ಲಿ ವ್ಯಾಪಾರ ಆರಂಭಿಸಿ 2017ರವರೆಗೆ ಸಾಲದ ಕಂತುಗಳನ್ನು ಮರು ಪಾವತಿಸಿದ್ದಾರೆ. ಆದರೆ, ನಂತರ ಸಾಲ ಮರುಪಾವತಿ ಮಾಡಿಲ್ಲ. ಸ್ಥಳಕ್ಕೆ ಭೇಟಿನೀಡಿ ತಪಾಸಣೆ ನಡೆಸಿದಾಗ ಅಂಗಡಿಯಲ್ಲಿದ್ದ ಎಲ್ಲ ಸಾಮಗ್ರಿಗಳನ್ನು ಖಾಲಿ ಮಾಡಿರುವುದು ಮತ್ತು ಮಳಿಗೆಯನ್ನು ಬೇರೊಬ್ಬರಿಗೆ ಹಸ್ತಾಂತರಿಸಿ ವಂಚಿಸಿರುವುದು ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !