ಮಂತ್ರಿವರ್ಯರ ನಡುವೆ ಮಹಾರಾಜ ಕೂತಂತ ಅನುಭವ

7

ಮಂತ್ರಿವರ್ಯರ ನಡುವೆ ಮಹಾರಾಜ ಕೂತಂತ ಅನುಭವ

Published:
Updated:

ಮಂತ್ರಿವರ್ಯರ ನಡುವೆ ಮಹಾರಾಜ ಕೂತಂತ ಅನುಭವ

ಇತ್ತೀಚೆಗೆ ಗಾಂಧಿನಗರದಿಂದ ಹುಬ್ಬಳ್ಳಿಗೆ ಸಾಗಬೇಕಿದ್ದ ನಾವು ಚಿಗರಿ ಬಸ್‌ ಏರಿದ್ದೆವು. ಹೊರ ವಾಹನಗಳ ಹಾರ್ನ್‌ಗಳ ರಚಾಟಕ್ಕೆ ನಲುಗಿದ ಕಿವಿಗಳು ಇಯರ್ ಫೋನ್‌ಗಾಗಿ ಹಪಹಪಿಸಿತ್ತು. ಖಾಲಿ ಸೀಟಿನ ಹುಡುಕಾಟದಲ್ಲಿದ್ದ ಕಣ್ಣುಗಳಿಗೆ ಬಿದ್ದಿದ್ದೆ ಹಿಂದಿನ ಎತ್ತರದ ಸೀಟ್. ಎತ್ತರದ ಸೀಟಿನ ಮೇಲೆ, ಇಯರ್ ಫೋನ್‌ನಲ್ಲಿ ಹಾಡನ್ನು ಕೇಳುತ್ತ ಏರ್ ಕಂಡೀಷನ್‌ನಲ್ಲಿ ಕೂತು ಒಮ್ಮೆ ನಮ್ಮ ಮುಂದೆ ಕೂತ ಜನರತ್ತ ನೋಡಿದರೆ ಮಂತ್ರಿವರ್ಯರ ನಡುವೆ ಮಹಾರಾಜ ಕೂತಂತೆ ಅನುಭವ. ಜಂಬುಸವಾರಿಯಲ್ಲಿ ಆನೆಯು ಮಹಾರಾಜನನ್ನು ಹೊತ್ತೊಯ್ಯುವ ಅನುಭವ!

ಅದೃಷ್ಟದ ದಾರಿಯಲ್ಲಿ ಕೌತುಕದ ತಿರುವು ಎಂಬಂತೆ ಮುಂದಿನ ಸ್ಟಾಪ್‌ನಲ್ಲಿ ಬಸ್‌ ಹತ್ತಿದ ಹುಡುಗಿಯರ ಗುಂಪು ಮಹಾರಾಜನ ಸಭಾಂಗಣಕ್ಕೆ ನಾಟ್ಯಮಯೂರಿಯರು ಬಂದಂತಿತ್ತು. ಅನುಭವದ ಬುತ್ತಿಗೆ ಮತ್ತಷ್ಟು ಅನುಭವಗಳನ್ನು ಸೇರಿಸುತ್ತಿರುವ ಚಿಗರಿಗೆ ಥ್ಯಾಂಕ್ಸ್.

ಸೌರಭ್ ಯಮಾಜೆ, ಗಾಂಧಿನಗರ

2)  ಕಮ್ಮಿಯಾದ ಟ್ರಾಫಿಕ್ ಕಿರಿಕಿರಿ

ಚಿಗರಿ ಬಸ್ ಸಂಚಾರ ಅರಂಭವಾದ ನಂತರ ಹುಬ್ಬಳ್ಳಿ-ಧಾರವಾಡ ನಡುವಿನ ಒಟ್ಟಾರೆ ನಿಲ್ದಾಣಗಳ ಸಂಖ್ಯೆ ಜೊತೆಗೆ ಟ್ರಾಫಿಕ್ ಕಿರಿಕಿರಿ ಕಡಿಮೆ ಆಗಿದೆ. ಹಾಗಾಗಿ ಸಮಯದಲ್ಲಿ ಉಳಿತಾಯವಾಗಿದೆ. ಮತ್ತು ಹೊಸ ಅನುಭವ ನೀಡುತ್ತಿದೆ.

ಚೇತನ್‌ ಎನ್‌.ಎಸ್‌.

3 ) ಪ್ರಯಾಣದಲ್ಲಿ ಹೊಸತನ

ಹುಬ್ಬಳ್ಳಿ–ಧಾರವಾಡ ಅವಳಿ ನಗರದ ನಡುವೆ ಪ್ರಾರಂಭವಾಗಿರುವ ಬಿಆರ್‌ಟಿಎಸ್‌ ಬಸ್ ಸೇವೆ ಯಶಸ್ವಿಯಾಗಿ ಎರಡು ತಿಂಗಳನ್ನು ಮುಗಿಸಿದೆ. ಇದರಲ್ಲಿ ಪ್ರಯಾಣ ಮಾಡುವ ಪ್ರತಿ ಪ್ರಯಾಣಿಕರಿಗೂ ಹೊಸ ಅನುಭವ ನೀಡುತ್ತದೆ. ಟಿಕೆಟ್ ರಹಿತ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಕಡಿವಾಣ ಹಾಕಲಿದೆ ಎಂದು ಹೇಳಬಹುದು. ಆದರೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಪ್ರದೇಶದಲ್ಲಿ ಕೆಲವು ಪ್ರಯಾಣಿಕರಿಗೆ ತಂಗುದಾಣದಲ್ಲಿ ಬಸ್ ಹತ್ತುವಾಗ ಹಾಗೂ ಇಳಿಯುವಾಗ ಕೊಂಚ ಮಟ್ಟಿನ ತೊಂದರೆ ಅನುಭವಿಸುತ್ತಿರುವುದು ಕಂಡು ಬರುತ್ತಿದೆ. ಸ್ವಲ್ಪ ಯಾಮಾರಿದರೂ ಮುಂದಿನ ನಿಲುಗಡೆಗೆ ಇಳಿದುಕೊಳ್ಳಬೇಕಾಗುತ್ತದೆ. ಪ್ರಯಾಣಿಕರು ಸ್ವಲ್ಪ ಮುಂಜಾಗ್ರತಾ ಕ್ರಮವನ್ನು ವಹಿಸಿದರೆ ಇಂತಹ ಚಿಕ್ಕ ಪುಟ್ಟ ಸಮಸ್ಯೆಗಳನ್ನು ನಿವಾರಿಸಬಹುದು. ಏನೇ ಆದರೂ ಬಿಆರ್‌ಟಿಎಸ್ ಪ್ರಯಾಣಿಕರಿಗೆ ಪ್ರಯಾಣದ ಹೊಸ ಅನುಭವಗಳನ್ನು ನೀಡುತ್ತಿದೆ.

ಈಶ್ವರ ಹೊರಟ್ಟಿ ಹಳೇ ಹುಬ್ಬಳ್ಳಿ

4) ಛೀ..ಗರಿ!

ಹೆಸರೆನೋ ಚಿಗರಿ. ಆದ್ರು ಟ್ರಾಫಿಕ್ ನಿವಾರಿಸಲು ಅಸಾಧ್ಯವಾಗಿದ್ದರಿಂದ ಜನರಿಂದ ಸಿಕ್ಕಿರುವುದು ಮಾತ್ರ ಛೀ..ಗರಿ!

ನವೀನ ಅಣ್ಣಿಗೇರಿ

5) ಡೆಂಟಲ್ ಕ್ರಾಸಿಗೊಂದು ಬಿಆರ್‌ಟಿಎಸ್‌ ತಂಗುದಾಣ ಇರಲಿ

ಬಿಆರ್‌ಟಿಎಸ್‌ ಬಸ್ ತಂಗುದಾಣಗಳ ನಡುವಿನ ಅಂತರ ಬಹಳ ದೂರವಾಗಿದೆ. ಸತ್ತೂರು, ಡೆಂಟಲ್, ಡೆಂಟಲ್ ಕ್ರಾಸ್ ಸೇರಿ ಒಂದೇ ಬಸ್ ನಿಲ್ದಾಣವಾಗಿದೆ. ಈಗೇನೋ ನಗರ ಸಾರಿಗೆ ಬಸ್‌ಗಳು ಇರುವುದರಿಂದ ಸಮಸ್ಯೆ ಎನಿಸದು. ಮುಂದೆ ಡೆಂಟಲ್ ಕ್ರಾಸ್‌ನಲ್ಲಿ ಹತ್ತುವ ಮಂದಿಗೆ ಅಲ್ಲಿ ತನಕ ನಡೆಯಬೇಕಾಗುವುದರಿಂದ ಬಹಳ ತೊಂದರೆಯಾಗಬಹುದು. ಡೆಂಟಲ್ ಕ್ರಾಸ್‌ಗೆ ಒಂದು ಬಿಆರ್‌ಟಿಎಸ್‌ ತಂಗುದಾಣ ಇರುವಂತಿದ್ದರೆ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತಿತ್ತು.

ವಿನೋದ್ ಸತ್ತೂರು

6) ಬಿಆರ್‌ಟಿಎಸ್‌ನಿಂದ ಉದ್ಯೋಗಾವಕಾಶ

ಬಿಆರ್‌ಟಿಎಸ್‌ನ ಚಿಗರಿ ಸೇವೆ ಉತ್ತಮವಾಗಿದ್ದು ಉದ್ಯೋಗಾವಕಾಶವೂ ಸೃಷ್ಟಿಯಾಗಿದೆ. ಒಂದು ನಿಲ್ದಾಣದಲ್ಲಿ ಸುಮಾರು 8–10 ಜನ ಸಿಬ್ಬಂದಿಯಿದ್ದಾರೆ. ಮಕ್ಕಳೊಂದಿಗೆ ಬರುವ ಗ್ರಾಮೀಣ ಜನರು, ವೃದ್ಧರು, ರೈತರು ಆ ಕಡೆ ಈ ಕಡೆ ಲೆಕ್ಕಿಸದೆ ಚಿಗರಿ ಬಸ್‌ ಏರುವುದನ್ನು ಸಿಬ್ಬಂದಿ ಗಮನಿಸಬೇಕು.

ನಿಂಗಪ್ಪ ನಾಯ್ಕರ್‌

7) ಅವಳಿ ನಗರದಲ್ಲಿ ಉತ್ತಮ ಬೆಳವಣಿಗೆ

ಚಿಗರಿ ಬಸ್ ಸಂಚಾರದಿಂದ ತುಂಬಾ ಖುಷಿಯಾಗಿದೆ. ಎಲ್ಲರಿಗೂ ತುಂಬಾ ಪ್ರಯೋಜನವಾಗಿದೆ. ಹುಬ್ಬಳ್ಳಿ-ಧಾರವಾಡ ಅವಳಿನಗರದ ಉತ್ತಮ ಬೆಳವಣಿಗೆ ಎನ್ನಬಹುದು.
ಸಾರ್ವಜನಿಕರಿಗೆ ಸ್ವಲ್ಪ ಮಟ್ಟಿಗೆ ತೊಂದರೆ ಆಗುತ್ತಿದ್ದರು ಕೂಡ ಸ್ವಲ್ಪ ದಿನದ ನಂತರ ಎಲ್ಲವೂ ಸರಿ ಹೋಗುವುದೆಂಬ ಆಶಾಭಾವವಿದೆ. ಆದ್ದರಿಂದ ಸಾರ್ವಜನಿಕರು ಚಿಗರಿ ಬಸ್ ಸಂಚಾರಕ್ಕೆ ಸಹಕರಿಸಬೇಕೆಂದು ನನ್ನ ವಿನಂತಿ.
ಬರ್ಕತ್ ಅಲಿ ಹಾಲಕೇರಿ

8) ಆದಷ್ಟು ಬೇಗ ಟ್ರಾಫಿಕ್ ಸಿಗ್ನಲ್‌ ಅಳವಡಿಸಿ

ಬಸ್ ತುಂಬಾ ಆರಾಮದಾಯಕವಾಗಿದೆ. ನಾಗರಿಕರಿಗೆ, ಹಿರಿಯ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳು ತುಂಬಾ ಅನುಕೂಲವಾಗಿದೆ. ಆದರೆ ಟ್ರಾಫಿಕ್ ಸಿಗ್ನಲ್‌ಗಳನ್ನು ಆದಷ್ಟು ಬೇಗ ಅಳವಡಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಉದಾ: ಧಾರವಾಡ ಟೋಲ್ ನಾಕಾ ಹತ್ತಿರ ವಾಹನಗಳ ದಟ್ಟಣೆಯಿಂದ ಹಾಗೂ ಸಿಗ್ನಲ್ ಇಲ್ಲದಿರುವುದು ಖಾಸಗಿ ವಾಹನ ಸಂಚಾರಕ್ಕೆ ತುಂಬಾ ಅಡಚಣೆಯಾಗಿದೆ. ಸಂಬಂದಪಟ್ಟ ಅಧಿಕಾರಿಗಳು ಕೂಡಲೇ ಪರಿಹಾರ ಒದಗಿಸಲು ‘ಪ್ರಜಾವಾಣಿ’ ಮೂಲಕ ಜನತೆಯ ಪರವಾಗಿ ವಿನಂತಿಸುತ್ತೇನೆ.

ಕೊಟ್ರೇಶ್ ಮರಳಿ, ಧಾರವಾಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !