ಚಳಿಗಾಲದ ಫ್ಯಾಷನ್ ಸ್ಯಾಟಿನ್ ಉಡುಪು

7
satin dress- trend

ಚಳಿಗಾಲದ ಫ್ಯಾಷನ್ ಸ್ಯಾಟಿನ್ ಉಡುಪು

Published:
Updated:
Deccan Herald

ಈ ವರ್ಷದ ಚಳಿಗಾಲದ ಟ್ರೆಂಡ್ ಆಗಿ ಸ್ಯಾಟಿನ್ ಉಡುಪು ಗಳು ಫ್ಯಾಷನ್ ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ. ಈ ಬಾರಿಯ ಚಳಿಗಾಲದಲ್ಲಿ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಸ್ಯಾಟಿನ್ ಉಡುಪುಗಳನ್ನೇ ತೊಟ್ಟು ಮಿಂಚಿರುವುದು ವಿಶೇಷ.

ಸ್ಯಾಟಿನ್ ಉಡುಪುಗಳು ಭಿನ್ನವಾಗಿ ಗಮನ ಸೆಳೆಯುವು ದಲ್ಲದೇ, ನಾಲ್ಕು ಜನರ ಮಧ್ಯೆ ನಿಮ್ಮನ್ನು ಆಕರ್ಷಣೆಯ ಕೇಂದ್ರ ಬಿಂದುವಾಗಿಸುತ್ತದೆ. ಆದ್ದರಿಂದ ಸೆಲೆಬ್ರಿಟಿಗಳು ಸ್ಯಾಟಿನ್ ಉಡುಪುಗಳ ಮೊರೆ ಹೋಗುತ್ತಾರೆ ಎನ್ನುತ್ತದೆ ಫ್ಯಾಷನ್ ಉದ್ಯಮ. ಹಾಲಿವುಡ್–ಬಾಲಿವುಡ್ ಎರಡಲ್ಲೂ ಜನಪ್ರಿಯತೆ ಗಳಿಸಿರುವ ನಟಿ ಪ್ರಿಯಾಂಕ ಚೋಪ್ರಾ ಅವರಿಂದ ಹಿಡಿದು ಶಮಿತಾ ಶೆಟ್ಟಿಯವರೆಗೆ ಸ್ಯಾಟಿನ್ ಉಡುಪುಗಳ ಟ್ರೆಂಡ್ ಅಚ್ಚೊತ್ತಿದೆ. ಉದ್ದನೆಯ ಗೌನ್‌ಗಳಷ್ಟೇ ಅಲ್ಲ, ಸೀರೆ, ಪ್ಯಾಂಟ್ ಸೂಟ್ಸ್‌, ಫ್ರಾಕ್ ಮಾದರಿಯ ಸ್ಯಾಟಿನ್ ಉಡುಪುಗಳು ಸೆಲೆಬ್ರಿಟಿಗಳ ವಾರ್ಡ್‌ ರೋಬ್‌ನಲ್ಲಿ ಸ್ಥಾನಪಡೆದಿವೆ. ಹಾಗಾಗಿಯೇ ಸ್ಟೈಲ್ ಎಕ್ಸ್‌ಪರ್ಟ್ಸ್‌ಗಳು ತಮ್ಮ ವಿನ್ಯಾಸದ ಉಡುಪುಗಳಲ್ಲಿ ಕಡ್ಡಾಯವಾಗಿ ಸ್ಯಾಟಿನ್ ವಸ್ತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ.

‘ಸ್ಯಾಟಿನ್ ಈ ಚಳಿಗಾಲದ ಹಾಟ್ ಟ್ರೆಂಡ್ ಆಗಿದೆ. 70ರ ದಶಕದಲ್ಲಿ ಉತ್ತುಂಗದ ಸ್ಥಿತಿಯಲ್ಲಿದ್ದ ಈ ಟ್ರೆಂಡ್ ಈಗ ಮರುಕಳಿಸಿದೆ. ಸ್ಯಾಟಿನ್ ವಯೋಮಾನ ಮೀರಿ ಎಲ್ಲರ ನೆಚ್ಚಿನ ಫ್ಯಾಬ್ರಿಕ್ ಆಗಿಬಿಟ್ಟಿದೆ’ ಎನ್ನುತ್ತಾರೆ ವಸ್ತ್ರವಿನ್ಯಾಸಕ ನಚಿಕೇತ್.

‘ಈ ಹಿಂದೆ ಸ್ಯಾಟಿನ್ ಉಡುಪುಗಳನ್ನು ನೈಟ್ ಡ್ರೆಸ್‌ಗಳಾಗಿ ಬಳಸುತ್ತಿದ್ದರು. ಆದರೆ, ಸ್ಯಾಟಿನ್ ಈಗ ನೈಟ್ ವೇರ್‌ನಿಂದ ಡೇ ವೇರ್‌ಗಳಾಗಿ ಬದಲಾಗಿವೆ. ಮೊದಲು ಸ್ಯಾಟಿನ್ ಪೈಜಾಮ ಟ್ರೆಂಡ್‌ ಇತ್ತು. ಈಗ ವಿವಿಧ ರೀತಿಯ ಉಡುಪುಗಳಲ್ಲೂ ಸ್ಯಾಟಿನ್ ಫ್ಯಾಬ್ರಿಕ್ ಅನ್ನು ಬಳಸುತ್ತಿದ್ದೇವೆ’ ಎನ್ನುತ್ತಾರೆ ವಸ್ತ್ರವಿನ್ಯಾಸಕಿ ರಿನಾ ಢಾಕಾ.

 ಪುರುಷರೂ ತಮ್ಮ ಶರ್ಟ್‌ಗಳಲ್ಲಿ ಸ್ಯಾಟಿನ್ ಬಳಸುತ್ತಿದ್ದಾರೆ. ಸ್ಯಾಟಿನ್ ಔಟ್‌ಫಿಟ್‌ಗಳ ಬಳಕೆ ಹೆಚ್ಚುತ್ತಿ ರುವುದು ಸ್ಯಾಟಿನ್ ಜನಪ್ರಿಯತೆಗೆ ಸಾಕ್ಷಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !