ಅಪಾಯ ಆಹ್ವಾನಿಸುವ ರಸ್ತೆ ಸಂಚಾರ

7

ಅಪಾಯ ಆಹ್ವಾನಿಸುವ ರಸ್ತೆ ಸಂಚಾರ

Published:
Updated:

ಚಿಂಚೋಳಿ: ತಾಲ್ಲೂಕಿನ ಸುಲೇಪೇಟ ರಾಣಾಪೂರ ಮಾರ್ಗದ ಜಿಲ್ಲಾ ಮಧ್ಯಮ ರಸ್ತೆ(ಎಂಡಿಆರ್) ಹಾದು ಹೋಗುವ ಯಲಕಪಳ್ಳಿ ಬಳಿ ಘಾಟ್ ಅಪಾಯಕ್ಕೆ ಆಹ್ವಾನಿಸುತ್ತಿದೆ.ಯಲಕಪಳ್ಳಿಯಿಂದ ಪಸ್ತಪೂರ ಕಡೆಗೆ ಹೋಗುವಾಗ ಎಡ ಭಾಗಕ್ಕೆ ಭಾರಿ ಕಂದರವಿದ್ದು, ಅಪಾಯದ ಗಂಟೆ ಬಾರಿಸುವಂತಾಗಿದೆ. ಇಲ್ಲಿ ಕಳೆದ ವರ್ಷ ತ್ರಿಚಕ್ರ ಅಟೊ ಉರುಳಿ ಒಬ್ಬರು ಯುವಕರು ಮೃತಪಟ್ಟ ಘಟನೆ ನಡೆದಿತ್ತು. ಈ ಮಾರ್ಗದಲ್ಲಿ ಸಾರಿಗೆ ಸೌಲಭ್ಯದ ಕೊರತೆಯಿದ್ದು, ಅಟೊಗಳ ಟಾಪ್ ಮೇಲೆ ಕುಳಿತು ಪಯಣಿಸುವುದು ಇಲ್ಲಿ ಸಾಮಾನ್ಯ. ಹೀಗಾಗಿ ವಾಹನ ಚಾಲಕರು ಎಚ್ಚರ ತಪ್ಪಿದರೆ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದ್ದು, ಜಿಲ್ಲಾ ಆಡಳಿತ ಈ ಕಡೆ ಗಮನ ಹರಿಸಬೇಕೆಂದು ಈ ಭಾಗದ ಜನರು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry