ಶ್ರದ್ಧಾ ಭಕ್ತಿಯ ವೈಕುಂಠ ಏಕಾದಶಿ ಆಚರಣೆ

7

ಶ್ರದ್ಧಾ ಭಕ್ತಿಯ ವೈಕುಂಠ ಏಕಾದಶಿ ಆಚರಣೆ

Published:
Updated:

ಬೀದರ್: ನಗರದ ರಾಂಪುರೆ ಕಾಲೊನಿಯ ಲಕ್ಷ್ಮಿ ಸತ್ಯನಾರಾಯಣ ಮಂದಿರ ಹಾಗೂ ಅಗ್ರಹಾರದ ಅನಂತಶಯನ ಮಂದಿರದಲ್ಲಿ ಮಂಗಳವಾರ ಶ್ರದ್ಧಾ ಭಕ್ತಿಯಿಂದ ವೈಕುಂಠ ಏಕಾದಶಿ ಆಚರಿಸಲಾಯಿತು.

ಎರಡೂ ಮಂದಿರಗಳಲ್ಲಿ ಬೆಳಿಗ್ಗೆಯಿಂದ ತಡರಾತ್ರಿವರೆಗೂ ಅಭಿಷೇಕ ನಡೆದವು.

ಅನಂತಶಯನ ಮಂದಿರದಲ್ಲಿ ಶ್ರೀಪಾದ ದೀಕ್ಷಿತ್, ಪ್ರವೀಣ ಜೋಶಿ, ಬಾಲಚಂದ್ರ ದೀಕ್ಷಿತ್, ಶ್ರೀನಿವಾಸ ಕುಲಕರ್ಣಿ ನೇತೃತ್ವದಲ್ಲಿ ಪೂಜೆ ಕಾರ್ಯಕ್ರಮ, ಕುಂಕುಮಾರ್ಚನೆ, ಸಹಸ್ರ ತುಳಸಿ ಅರ್ಚನೆ, ಭಜನೆ, ಪ್ರವಚನ ಜರುಗಿದವು. ಸತತ 15 ಗಂಟೆ ಕಾಲ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು.

ದೇವಸ್ಥಾನದ ಅಶೋಕ ರೇಜಂತಲ್‌, ವೆಂಕಟೇಶ ಗಾದಾ, ವೆಂಕಟೇಶ ಯರಮಲ್ಲಿ, ದಿಗಂಬರ ಪೋಲಾ ಮೊದಲಾದವರು ಇದ್ದರು.

ಲಕ್ಷ್ಮಿ ಸತ್ಯನಾರಾಯಣ ಮಂದಿರದಲ್ಲಿ ಪೂಜೆ, ಅಭಿಷೇಕ, ವಿಷ್ಣು ಸಹಸ್ರನಾಮಾವಳಿ, ಮಂತ್ರಜಪ, ಅಷ್ಟಾಕ್ಷರಿ, ಚಕ್ರಿ ಭಜನೆ, ಭಕ್ತಿ ಸಂಗೀತ, ಪುಷ್ಪಾರ್ಚನೆ, ರಥೋತ್ಸವ, ಶೇಜಾರತಿ ಕಾರ್ಯಕ್ರಮ ನಡೆದವು. ಸತ್ಯನಾರಾಯಣ ದೇವರಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ನರಸಿಂಹ ದೀಕ್ಷಿತ್ ನೇತೃತ್ವದಲ್ಲಿ ಪೂಜೆ ಕಾರ್ಯಕ್ರಮ ನಡೆದವು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !