ನಿರ್ಭಯವಾಗಿ ಬರೆಯುವ ಸ್ವಾತಂತ್ರ್ಯವಿಲ್ಲ: ಪತ್ರಕರ್ತ ಪಾರ್ವತೀಶ್‌ ಕಳವಳ

7

ನಿರ್ಭಯವಾಗಿ ಬರೆಯುವ ಸ್ವಾತಂತ್ರ್ಯವಿಲ್ಲ: ಪತ್ರಕರ್ತ ಪಾರ್ವತೀಶ್‌ ಕಳವಳ

Published:
Updated:
Deccan Herald

ಕೋಲಾರ: ‘ದೇಶದಲ್ಲಿ ಸಾಹಿತಿಗಳು ಹಾಗೂ ಲೇಖಕರು ಅಂಗರಕ್ಷಕರನ್ನು ಇಟ್ಟುಕೊಂಡು ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಸಾಮಾಜಿಕ ನ್ಯಾಯಕ್ಕೆ ಹೋರಾಡುವವರು ಪ್ರಾಣ ಭಯದಲ್ಲಿದ್ದಾರೆ’ ಎಂದು ಪತ್ರಕರ್ತ ಪಾರ್ವತೀಶ್‌ ಕಳವಳ ವ್ಯಕ್ತಪಡಿಸಿದರು.

ಸಮ್ಮೇಳನದಲ್ಲಿ ‘ಸಿ.ಎಸ್.ದ್ವಾರಕನಾಥ್ ಬಹುಮುಖದ ಬದುಕು’ ಕುರಿತ ವಿಚಾರಗೋಷ್ಠಿಯಲ್ಲಿ ಮಾತನಾಡಿ, ‘ದೇಶದಲ್ಲಿ ಇಂದು ನಿರ್ಭಯವಾಗಿ ಬರೆಯುವ ಮತ್ತು ಮಾತನಾಡುವ ಸ್ವಾತಂತ್ರ್ಯ ಇಲ್ಲವಾಗಿದೆ’ ಎಂದು ವಿಷಾದಿಸಿದರು.

‘ಸಿ.ಎಸ್‌.ದ್ವಾರಕನಾಥ್‌ ಬರಹ ಮತ್ತು ಕಾಳಜಿ’ ಕುರಿತು ವಿಚಾರ ಮಂಡಿಸಿದ ಪತ್ರಕರ್ತ ದಿಲಾವರ್‌ ರಾಮದುರ್ಗ, ‘ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಸಭೆಗಳಲ್ಲಿ ಎದ್ದು ನಿಂತು ರಾಷ್ಟ್ರಗೀತೆ ಹಾಡಿದರೆ ರಾಷ್ಟ್ರ ಭಕ್ತರಾಗುವುದಿಲ್ಲ. ಅಂತಹವರು ನಿಜವಾದ ರಾಷ್ಟ್ರ ದ್ರೋಹಿಗಳು’ ಎಂದು ಅಭಿಪ್ರಾಯಪಟ್ಟರು.

‘ಹೈದರಾಲಿ ಅದ್ಭುತವಾದ ಸಸ್ಯ ಪ್ರಭೇದ ನೀಡಿದ್ದರ ಫಲವಾಗಿ ಲಾಲ್‌ಬಾಗ್‌ನಲ್ಲಿ ಸಸ್ಯ ಜಗತ್ತು ನೋಡುತ್ತಿದ್ದೇವೆ. ಬ್ರಿಟೀಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನ್ ನಾಡಿಗೆ ಅಪಾರ ಕೊಡುಗೆ ನೀಡಿದ್ದರೂ ಅವರನ್ನು ದೇಶದ್ರೋಹಿ ಎಂದು ಬಿಂಬಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದ್ವಾರಕನಾಥ್‌ ಎಲ್ಲಾ ಸಮುದಾಯಗಳ ಕಷ್ಟ ಸುಖ ಹಂಚಿಕೊಳ್ಳುವ ಮೂಲಕ ಹೆಜ್ಜೆ ಹಾಕುತ್ತಿದ್ದಾರೆ. ಅವರನ್ನು ಎಡಪಂಥೀಯ ದೃಷ್ಟಿಕೋನದಿಂದ ಬಿಂಬಿಸಲಾಗಿದೆ. ಇವರು ವೈಜ್ಞಾನಿಕವಾಗಿ ಸಾಧಕ ಬಾಧಕ ಪರಿಶೀಲಿಸಿ ಕೃತಿ ರಚನೆ ಮಾಡುತ್ತಾರೆ. ಸಂವಿಧಾನದಲ್ಲಿ ಸಿಗಬೇಕಾದ ಸೌಲಭ್ಯಗಳನ್ನು ನೀಡುವುದು ಇವರ ಬದುಕಿನ ವೈಶಿಷ್ಟ್ಯ’ ಎಂದರು.

‘ದ್ವಾರಕನಾಥ್‌ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವ ಮತ್ತು ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ’ ಎಂದು ಕವಿ ಹುಲಿಕುಂಟೆ ಮೂರ್ತಿ ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !