ಎಚ್‌ಕೆಇ ಮುಟ್ಟುಗೋಲಿಗೆ ಆಗ್ರಹ

7

ಎಚ್‌ಕೆಇ ಮುಟ್ಟುಗೋಲಿಗೆ ಆಗ್ರಹ

Published:
Updated:
ಎಚ್‌ಕೆಇ ಮುಟ್ಟುಗೋಲಿಗೆ ಆಗ್ರಹ

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯು ರಾಜ್ಯ ಸರ್ಕಾರದೊಂದಿಗೆ ಕೂಡಿಕೊಂಡು ಕಾನೂನಿನ ಉಲ್ಲಂಘನೆ ಮಾಡಿದ್ದು, ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆ.ಕೂಡಲೇ ಈ ಶಿಕ್ಷಣ ಸಂಸ್ಥೆಯನ್ನು ಮುಟ್ಟುಗೋಲು ಹಾಕಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿ ಹೈ.ಕ. ಶೈಕ್ಷಣಿಕ ಸುಧಾರಣಾ ಕ್ರಿಯಾ ಸಮಿತಿ ಸದಸ್ಯರು ಮಿನಿ ವಿಧಾನಸೌಧದ ಎದುರು ಶುಕ್ರವಾರದಿಂದ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.2007ರಲ್ಲಿ ಪಿಡಿಎ ಎಂಜಿನಿಯರಿಂಗ್ ಕಾಲೇಜಿಗೆ ಸಾಮಾನ್ಯ ನೇಮಕಾತಿ ನಿಯಮಗಳಡಿಯಲ್ಲಿ ವಿವಿಧ ವಿಭಾಗದ ಬೋಧಕ ಹಾಗೂ ಬೋಧಕೇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ವಯೋಮಿತಿ ಮೀರಿದವರನ್ನು ಸಂದರ್ಶನಕ್ಕೆ ಆಹ್ವಾನಿಸಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ.ಈಗಾಗಲೇ ಲೆಕ್ಕ ಪರಿಶೋಧನಾ ಸಮಿತಿಯು 2008 ಹಾಗೂ 2010ರಲ್ಲಿ ವಯೋಮಿತಿ ಮೀರಿದ ಸಿಬ್ಬಂದಿಯ ವೇತನ ಹಾಗೂ ಭತ್ಯೆಯನ್ನು ತಿರಸ್ಕರಿಸಿದ್ದಾರೆ ಎಂದು ರಾಜ್ಯಪಾಲರಿಗೆ ಕಳುಹಿಸಿರುವ ಮನವಿಯಲ್ಲಿ ವಯೋಮಿತಿ ಮೀರಿದ ಸಿಬ್ಬಂದಿ ವಿವರಗಳನ್ನು ಉಲ್ಲೇಖಿಸಿದ್ದಾರೆ.ಸರ್ಕಾರವು 2011ರಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದು, ವಯೋಮತಿ ಮೀರಿದ ಐದು ಅಭ್ಯರ್ಥಿಗಳ ನೇಮಕಾತಿಯನ್ನು ನಿಯಮಮೀರಿ ಅನುಮೋದಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲು ಸೂಚಿಸಲಾಗಿತ್ತು. ಇಲ್ಲಿಯವರೆಗೂ ಭ್ರಷ್ಟಾಚಾರದ ಕುರಿತು ತನಿಖೆ ನಡೆದಿಲ್ಲ. ಸರ್ಕಾರವು ಶಿಕ್ಷಣ ಸಂಸ್ಥೆಯೊಂದಿಗೆ ಶಾಮೀಲಾಗಿದೆ ಎಂದು ತಿಳಿಸಲಾಗಿದೆ.ನೇಮಕಾತಿ ಸಂದರ್ಭದಲ್ಲಿ ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕು. ಉನ್ನತ ಶಿಕ್ಷಣ ಸಚಿವ ವಿ.ಎಸ್. ಆಚಾರ್ಯ ರಾಜೀನಾಮೆ ನೀಡಬೇಕು. ಹೈ.ಕ. ಶಿಕ್ಷಣ ಸಂಸ್ಥೆ ಸದಸ್ಯತ್ವ ನೋಂದಣಿಗಾಗಿ ಅರ್ಜಿ ಹಾಕಿರುವವರಿಗೆ ಸದಸ್ಯತ್ವ ನೀಡಬೇಕು ಎಂದು ಸಮಿತಿ ಅಧ್ಯಕ್ಷ ಉಮೇಶ ಹಾವನೂರಕರ, ಉದಯಕುಮಾರ ಎಸ್. ಖೇಲ್ಗಿಕರ ಮನವಿ ಮಾಡಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry