ಇಟಲಿಯಲ್ಲಿ ಕಾಲ್ತುಳಿತ: ಆರು ಮಂದಿ ಸಾವು

7

ಇಟಲಿಯಲ್ಲಿ ಕಾಲ್ತುಳಿತ: ಆರು ಮಂದಿ ಸಾವು

Published:
Updated:

ರೋಮ್‌: ಇಟಲಿಯ ಕೊರಿನಾಲ್ಡೊದ ಬ್ಲ್ಯೂಲ್ಯಾಂಟರ್ನ್‌ ನೈಟ್‌ ಕ್ಲಬ್‌ನಲ್ಲಿ ಶನಿವಾರ ಬೆಳಗಿನ ಜಾವ ಕಾಲ್ತುಳಿತ ಉಂಟಾಗಿ ಕನಿಷ್ಠ ಆರು ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ನೈಟ್‌ಕ್ಲಬ್‌ನಲ್ಲಿ ರ‍್ಯಾಪ್‌ ಗಾಯಕ ಸ್ಪೆರಾ ಎಬಾಸ್ಟಾ ಅವರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಯಾರೋ ಪೆಪ್ಪರ್‌ ಸ್ಪ್ರೆಯಂತಹ ವಸ್ತುವನ್ನು ಬಳಕೆ ಮಾಡಿದ್ದಾರೆ. ಇದರ ದುರ್ವಾಸನೆಯಿಂದ ಜನರು ಆತಂಕಕ್ಕೆ ಒಳಗಾಗಿ ಕ್ಲಬ್‌ನಿಂದ ಹೊರಬರಲು ಯತ್ನಿಸಿದಾಗ ಕಾಲ್ತುಳಿತ ಉಂಟಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !