60 ಉಪಗ್ರಹ ಉಡಾವಣೆ ಮುಂದೂಡಿಕೆ

ಮಂಗಳವಾರ, ಮೇ 21, 2019
24 °C

60 ಉಪಗ್ರಹ ಉಡಾವಣೆ ಮುಂದೂಡಿಕೆ

Published:
Updated:
Prajavani

ವಾಷಿಂಗ್ಟನ್‌: ಸಾಫ್ಟ್‌ವೇರ್‌ನಲ್ಲಿನ ತಾಂತ್ರಿಕ ಕಾರಣಗಳಿಂದ 60 ಉಪಗ್ರಹಗಳ ಉಡಾವಣೆಯನ್ನು ’ಸ್ಪೇಸ್‌ ಎಕ್ಸ್‌‘ ಕಂಪನಿ ಮುಂದೂಡಿದೆ.

ಅಮೆರಿಕದ ಪ್ರಮುಖ ಖಾಸಗಿ ಕಂಪನಿಯಾಗಿರುವ ಸ್ಪೇಸ್‌ಎಕ್ಸ್‌ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿದೆ.

ಕೇಪ್‌ ಕಾನ್‌ವೆರಲ್‌ನಲ್ಲಿನ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೆಸ್‌ಎಕ್ಸ್‌  ಫಾಲ್ಕನ್‌ 9‘ ರಾಕೆಟ್‌  ಮೂಲಕ ಈ ಉಪಗ್ರಹಗಳನ್ನು ಉಡಾಯಿಸಲು ಉದ್ದೇಶಿಸಲಾಗಿತ್ತು.

ಈ ಉಪಗ್ರಹಗಳ ಮೂಲಕ ಭವಿಷ್ಯದಲ್ಲಿ ಬಾಹ್ಯಾಕಾಶ ಇಂಟರ್‌ನೆಟ್‌ ಮಾರುಕಟ್ಟೆಯಲ್ಲಿ ಹೆಚ್ಚು ಪಾಲು ಹೊಂದುವುದು ಸ್ಪೇಸ್‌ ಎಕ್ಸ್‌ ಉದ್ದೇಶವಾಗಿದ್ದು, ಪ್ರತಿ ವರ್ಷ ಅಂದಾಜು 30 ಬಿಲಿಯನ್‌ ಡಾಲರ್‌ (₹2104 ಶತಕೋಟಿ) ಆದಾಯ ಗಳಿಸುವ ಗುರಿ ಹೊಂದಿದೆ.

 ’ಉಪಗ್ರಹದ ಸಾಫ್ಟ್‌ವೇರ್‌ ಅನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಇನ್ನೊಂದು ವಾರದಲ್ಲಿ ಉಡಾವಣೆ ಕೈಗೊಳ್ಳಲಾಗುವುದು‘ ಎಂದು ಕಂಪನಿ ತಿಳಿಸಿದೆ.

ಪ್ರತಿಯೊಂದು ಉಪಗ್ರಹ ಕೇವಲ 227 ಕಿಲೋ ಗ್ರಾಂ ತೂಕ ಹೊಂದಿರುವುದು ವಿಶೇಷವಾಗಿದೆ. ಉಡಾವಣೆಯಾದ ಬಳಿಕ ಸುಮಾರು 550 ಕಿಲೋ ಮೀಟರ್‌ಗೆ ನಿಗದಿತ ಕಕ್ಷೆಗೆ ಉಪಗ್ರಹಗಳನ್ನು ಸೇರಿಸುವ ಯೋಜನೆ ರೂಪಿಸಲಾಗಿದೆ. ಭೂಮಿಯಿಂದ ಅತಿ ಕಡಿಮೆ ದೂರದಲ್ಲಿರುವುದರಿಂದ ಬ್ರಾಡ್‌ಬ್ಯಾಂಡ್‌ ಸಂಪರ್ಕಕ್ಕೆ ಅತಿ ಹೆಚ್ಚು ಅನುಕೂಲವಾಗಲಿದೆ.

12ಸಾವಿರ ಉಪಗ್ರಹಗಳಿಗೆ ಅನುಮತಿ

12 ಸಾವಿರ ಉಪಗ್ರಹಗಳನ್ನು ಉಡಾವಣೆ ಮಾಡಲು ಸ್ಪೆಸ್‌ಎಕ್ಸ್‌ ಅಮೆರಿಕ ಸರ್ಕಾರದ ಅನುಮತಿ ಪಡೆದುಕೊಂಡಿದೆ. ಆದರೆ, ಕೇವಲ ಒಂದು ಸಾವಿರ ಉಪಗ್ರಹಗಳ ಉಡಾವಣೆಯಿಂದ ಆರ್ಥಿಕತೆ ದೃಷ್ಟಿಯಿಂದ ಉತ್ತಮ ಎಂದು ಸ್ಪೆಸ್‌ ಎಕ್ಸ್‌ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲಾನ್‌ ಮಸ್ಕ್‌ ತಿಳಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !