ನಿರ್ಬಂಧ ಮುಂದುವರಿದರೆ ಬೇರೆ ಮಾರ್ಗ: ಕಿಮ್ ಜಾಂಗ್ ಉನ್

7

ನಿರ್ಬಂಧ ಮುಂದುವರಿದರೆ ಬೇರೆ ಮಾರ್ಗ: ಕಿಮ್ ಜಾಂಗ್ ಉನ್

Published:
Updated:
Prajavani

ಸೋಲ್: ‘ಅಮೆರಿಕ ತನ್ನ ನಿರ್ಬಂಧ ಮುಂದುವರಿಸಿದರೆ ಉತ್ತರ ಕೊರಿಯಾ ತನ್ನ ಸಾರ್ವಭೌಮತ್ವ ಹಾಗೂ ಹಿತಾಸಕ್ತಿ ಕಾಪಾಡಿಕೊಳ್ಳಲು ಹೊಸ ಮಾರ್ಗ ಹುಡುಕದೆ ಬೇರೆ ಆಯ್ಕೆ ಇಲ್ಲ’ ಎಂದು ಅಧ್ಯಕ್ಷ ಕಿಮ್ ಜಾಂಗ್ ಉನ್ ಎಚ್ಚರಿಸಿದ್ದಾರೆ. 

‘ಇಡೀ ಪ್ರಪಂಚದ ಎದುರು ನೀಡಿದ ಭರವಸೆಯನ್ನು ಅಮೆರಿಕ ಉಳಿಸಿಕೊಳ್ಳದೇ ಹೋದರೆ ಹಾಗೂ ಗಣತಂತ್ರದ ಮೇಲೆ ಒತ್ತಡ ಹೇರಿದರೆ ಬೇರೆ ದಾರಿ ಹುಡುಕಬೇಕಾಗುತ್ತದೆ’ ಎಂದು ಹೊಸ ವರ್ಷದ ಭಾಷಣದಲ್ಲಿ ಅವರು ಹೇಳಿದ್ದಾರೆ. 

ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಕಿಮ್ ಅವರ ಭಾಷಣವನ್ನು ಪ್ರಸಾರ ಮಾಡಿತು. ಜೂನ್‌ನಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜತೆ ಸಿಂಗಪುರದಲ್ಲಿ ನಡೆಸಿದ ಮಾತುಕತೆ ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ. ಆ ಮಾತುಕತೆಯನ್ನು ‘ಫಲಪ್ರದ’ ಎಂದಿದ್ದ ಅವರು, ರಚನಾತ್ಮಕ ವಿಷಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು ಎಂದಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !