ಭಾರತದ ಬೌಲರ್‌ಗಳು ಐಪಿಎಲ್‌ನಲ್ಲಿ ಆಡಲಿ: ಧೋನಿ ಸಲಹೆ

7

ಭಾರತದ ಬೌಲರ್‌ಗಳು ಐಪಿಎಲ್‌ನಲ್ಲಿ ಆಡಲಿ: ಧೋನಿ ಸಲಹೆ

Published:
Updated:
Prajavani

ಚೆನ್ನೈ: ಭಾರತ ಕ್ರಿಕೆಟ್ ತಂಡದಲ್ಲಿ ಆಡುತ್ತಿರುವ ಮಧ್ಯಮವೇಗದ ಬೌಲರ್‌ಗಳಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ಕೊಡುವುದು ಸೂಕ್ತ. ನಿಗದಿಯ ಓವರ್ ಕ್ರಿಕೆಟ್‌ನಲ್ಲಿ ಅವರ ಕೌಶಲವನ್ನು ಉತ್ತಮಪಡಿಸಿಕೊಳ್ಳಲು ಇದು ಸಹಾಯಕವಾಗುತ್ತದೆ ಎಂದು ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಹೇಳಿದ್ದಾರೆ.

ಚೆನ್ನೈನಲ್ಲಿ ಮಂಗಳವಾರ ನಡೆದ ಇಂಡಿಯಾ ಸಿಮೆಂಟ್ಸ್‌ ಸಂಸ್ಥೆಯ ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಮಾಡಿದ ಅವರು ಮಾತನಾಡಿದರು.  ಈಚೆಗೆ ತಂಡದ ನಾಯಕ ವಿರಾಟ್ ಕೊಹ್ಲಿ ಅವರು, ‘ಮೇ ತಿಂಗಳಲ್ಲಿ ಆರಂಭವಾಗುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತದ ಬೌಲರ್‌ಗಳಿಗೆ ಐಪಿಎಲ್‌ನಲ್ಲಿ  ಆಡಲು ಬಿಡಬಾರದು. ಅವರಿಗೆ ವಿಶ್ರಾಂತಿ ನೀಡಬೇಕು’ ಎಂದು ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಗೆ ಮನವಿ ಮಾಡಿದ್ದರು.

‘ಐಪಿಎಲ್‌ನಲ್ಲಿ ಟ್ವೆಂಟಿ–20 ಮಾದರಿಯ ಪಂದ್ಯಗಳು ನಡೆಯುತ್ತವೆ. ಒಂದು ಪಂದ್ಯದಲ್ಲಿ ಬೌಲರ್ ಗರಿಷ್ಠ ನಾಲ್ಕು ಓವರ್‌ಗಳನ್ನು ಬೌಲ್ ಮಾಡುತ್ತಾರೆ. ಇದು ದೊಡ್ಡ ವಿಷಯವಲ್ಲ. ಆದರೆ, ಈ ಪುಟ್ಟ ಸ್ಪೆಲ್‌ನಲ್ಲಿಯೇ ತಮ್ಮ ಎಲ್ಲ ಸಾಮರ್ಥ್ಯವನ್ನು ತೋರಿಸುವ ಸವಾಲು ಇರುತ್ತದೆ. ಆದ್ದರಿಂದ ಅವರ ಸಾಮರ್ಥ್ಯ ವೃದ್ಧಿ ಖಚಿತ. ಬೌಲರ್‌ಗಳ ಫಿಟ್‌ನೆಸ್‌ ಕೂಡ ಇಲ್ಲಿ ಪರೀಕ್ಷೆಗೆ ಒಳಪಡುತ್ತದೆ’ ಎಂದು ವಿಕೆಟ್‌ಕೀಪರ್ –ಬ್ಯಾಟ್ಸ್‌ಮನ್ ಧೋನಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ಕ್ರಿಕೆಟಿಗರಾದ ಕಪಿಲ್ ದೇವ್, ರಾಹುಲ್ ದ್ರಾವಿಡ್, ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಮತ್ತು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಎನ್. ಶ್ರೀನಿವಾಸನ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !