ಕೃಷ್ಣ– ಡಿಕೆಶಿ ಭೇಟಿ

7

ಕೃಷ್ಣ– ಡಿಕೆಶಿ ಭೇಟಿ

Published:
Updated:
Prajavani

ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ ಎಸ್‌.ಎಂ.ಕೃಷ್ಣ ಅವರನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮಂಗಳವಾರ ಭೇಟಿ ಮಾಡಿ ಚರ್ಚೆ ನಡೆಸಿದರು.

‘ಕೃಷ್ಣ ಅವರು ನನ್ನ ಮಾರ್ಗದರ್ಶಕರು. ರಾಜಕಾರಣದಲ್ಲಿ ಬೆಳೆಸಿದ್ದಾರೆ. ಹೊಸ ವರ್ಷದ ದಿನ ಅವರ ಆಶೀರ್ವಾದ ಪಡೆಯುತ್ತೇನೆ. ಈ ವರ್ಷವೂ ಅದೇ ರೀತಿ ಹೋಗಿದ್ದೇನೆ. ಕಾಂಗ್ರೆಸ್‌ ಪಕ್ಷಕ್ಕೆ ಮರಳಿ ಬನ್ನಿ ಎಂದು ಕರೆಯುವಷ್ಟು ದೊಡ್ಡ ವ್ಯಕ್ತಿ ನಾನಲ್ಲ’ ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

‘ಮೇಕೆದಾಟು ಯೋಜನೆ ಕುರಿತು ಇತ್ತೀಚೆಗೆ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿಗಳ ಸಭೆಗೆ ಕೃಷ್ಣ ಅವರು ಬಂದಿರಲಿಲ್ಲ. ಯೋಜನೆ ಕುರಿತು ಅವರಿಗೆ ಮಾಹಿತಿ ನೀಡಿದ್ದೇನೆ. ಅವರು ಸಲಹೆ ನೀಡಿದ್ದಾರೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

  • 2

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !