ಐದು ಪಿಂಕ್‌ ಬೇಬಿಗಳಿಗೆ ತಲಾ ₹ 5 ಲಕ್ಷ

7
ಜ. 1ರಂದು ಜನಿಸಿದ ಹೆಣ್ಣು ಮಕ್ಕಳಿಗೆ ಬಿಬಿಎಂಪಿ ಸೌಲಭ್ಯ

ಐದು ಪಿಂಕ್‌ ಬೇಬಿಗಳಿಗೆ ತಲಾ ₹ 5 ಲಕ್ಷ

Published:
Updated:
Prajavani

ಬೆಂಗಳೂರು: ಹೊಸ ವರ್ಷದ ಮೊದಲ ದಿನ ನಗರದ ವಿವಿಧೆಡೆ ಇರುವ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಒಟ್ಟು ಐದು ಹೆಣ್ಣು ಮಕ್ಕಳು (ಪಿಂಕ್‌ ಬೇಬಿ) ಜನಿಸಿವೆ. ಈ ಐವರಿಗೂ ಬಿಬಿಎಂಪಿ ತಲಾ ₹ 5 ಲಕ್ಷ ಠೇವಣಿ ಇಡಲಿದೆ.

ಜ.1ರಂದು ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆ ಮೂಲಕ ಜನಿಸುವ ಹೆಣ್ಣು ಮಕ್ಕಳಿಗೆ ₹ 5 ಲಕ್ಷ ನೀಡುವುದಾಗಿ ಬಿಬಿಎಂಪಿ ಘೋಷಿಸಿತ್ತು. ಇದಕ್ಕಾಗಿ ಪಾಲಿಕೆ ₹ 1.20 ಕೋಟಿ ಮೀಸಲಿರಿಸಿದೆ. 

ಈ ಹಣವನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಮತ್ತು ಮಗುವಿನ ತಾಯಿಯ ಹೆಸರಿನ ಜಂಟಿ ಖಾತೆಗೆ ಜಮಾ ಮಾಡಲಾಗುವುದು. ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಅವಶ್ಯಕತೆ ಬಿದ್ದಾಗ ಈ ಹಣವನ್ನು ಬಳಸಬಹುದು ಎಂದು ಮೇಯರ್‌ ಗಂಗಾಂಬಿಕೆ ತಿಳಿಸಿದರು.

ಕಳೆದ ವರ್ಷ ಒಂದು ಮಗುವಿಗಷ್ಟೇ ಈ ಮೊತ್ತ ಸಿಕ್ಕಿತ್ತು. ನಗರದ ತಾವರೆಕೆರೆ, ಗಂಗಾನಗರ, ನಂದಿನಿ ಲೇಔಟ್, ತಿಮ್ಮಯ್ಯ ರಸ್ತೆ ಹೆರಿಗೆ ಆಸ್ಪತ್ರೆ, ರಾಜಾಜಿನಗರ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಈ ಮಕ್ಕಳು ಜನಿಸಿವೆ.

ಬರಹ ಇಷ್ಟವಾಯಿತೆ?

  • 11

    Happy
  • 1

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !