ಕಮಿಷನರ್ ಕೊಠಡಿಗೆ ನುಗ್ಗಿದ 150 ಮಂದಿ; ಎಫ್‌ಐಆರ್‌

7

ಕಮಿಷನರ್ ಕೊಠಡಿಗೆ ನುಗ್ಗಿದ 150 ಮಂದಿ; ಎಫ್‌ಐಆರ್‌

Published:
Updated:

ಬೆಂಗಳೂರು: ನಗರ ಪೊಲೀಸ್ ಕಮಿಷನರ್‌ ಟಿ.ಸುನೀಲ್‌ಕುಮಾರ್‌ ಅವರ ಕೊಠಡಿಗೆ 150 ಮಂದಿ ಏಕಕಾಲದಲ್ಲೇ ನುಗ್ಗಿದ್ದ ಬಗ್ಗೆ  ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಮಿಷನರ್ ಕಚೇರಿಯ ಭದ್ರತಾ ಅಧಿಕಾರಿ ಎಸ್‌.ಎಂ.ಅಕ್ತರ್‌ ದೂರು ನೀಡಿದ್ದಾರೆ. ಅದನ್ನು ಆಧರಿಸಿ ಬಿ.ಆರ್.ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್‌ ಹಾಗೂ ಅವರ ಸಹಚರರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ವಿಧಾನಸೌಧ ಪೊಲೀಸರು ಹೇಳಿದರು.

‘ಸೋಮವಾರ ಬೆಳಿಗ್ಗೆ 11.15ರ ಸುಮಾರಿಗೆ 150 ಮಂದಿ ಜೊತೆಯಲ್ಲಿ ಸುರೇಶ್, ಕಚೇರಿಗೆ ಬಂದಿದ್ದರು. ಕಮಿಷನರ್‌ ಅವರನ್ನು ಭೇಟಿಯಾಗಲು ಅನುಮತಿ ಕೇಳಿದ್ದರು. 10 ಜನ ಮಾತ್ರ ಕೊಠಡಿಯೊಳಗೆ ಬಂದು ಭೇಟಿಯಾಗುವಂತೆ ಕಮಿಷನರ್‌ ಹೇಳಿದ್ದರು. ಅಷ್ಟಾದರೂ ಸುರೇಶ್, 150 ಜನರೊಂದಿಗೆ ಕೊಠಡಿಯೊಳಗೆ ನುಗ್ಗಿ ಆತಂಕದ ವಾತಾವರಣ ಸೃಷ್ಟಿಸಿದ್ದ’ ಎಂದು ಹೇಳಿದರು.

‘ಅನುಮತಿ ಇಲ್ಲದೇ ಗುಂಪುಗೂಡುವುದು (ಐಪಿಸಿ 143), ದೊಂಬಿ (ಐಪಿಸಿ 147) ಹಾಗೂ ಅಕ್ರಮವಾಗಿ ಗುಂಪುಗೂಡಿದ್ದ (ಐಪಿಸಿ 149) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಗಳೆಲ್ಲರೂ ತಲೆಮರೆಸಿಕೊಂಡಿದ್ದಾರೆ’ ಎಂದರು.  

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !