ರಣಜಿ ಟ್ರೋಫಿ: ಛತ್ತೀಸಗಡ ವಿರುದ್ಧ ಜಯ, ಎಂಟರ ಘಟ್ಟಕ್ಕೆ ಕರ್ನಾಟಕ

7

ರಣಜಿ ಟ್ರೋಫಿ: ಛತ್ತೀಸಗಡ ವಿರುದ್ಧ ಜಯ, ಎಂಟರ ಘಟ್ಟಕ್ಕೆ ಕರ್ನಾಟಕ

Published:
Updated:

ಬೆಂಗಳೂರು: ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ಈ ಬಾರಿ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ ಆಡುವುದು ಖಚಿತವಾಗಿದೆ.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದ ರಾಮಪ್ರಸಾದ್ ಓವಲ್ ಮೈದಾನದಲ್ಲಿ ಬುಧವಾರ ಮುಕ್ತಾಯವಾದ ಎಲೀಟ್ ಗುಂಪಿನ ಪಂದ್ಯದಲ್ಲಿ 198 ರನ್‌ ಗಳಿಂದ ಗೆದ್ದಿತು. ಇದರೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಒಟ್ಟು 27 ಅಂಕಗಳನ್ನು ಗಳಿಸಿ ಎರಡನೇ ಸ್ಥಾನಕ್ಕೇರಿತು. ಈ ಪಂದ್ಯಕ್ಕೂ ಮುನ್ನ ತಂಡವು ಐದನೇ ಸ್ಥಾನದಲ್ಲಿತ್ತು.

ಮನೀಷ್ ಪಾಂಡೆ (ಅಜೇಯ 102) ಶತಕದ ಬಲದಿಂದ ಕರ್ನಾಟಕ ತಂಡವು ಎರಡನೇ ಇನಿಂಗ್ಸ್‌ನಲ್ಲಿ 49.3 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 219 ರನ್‌ಗಳನ್ನು ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಮನೀಷ್ ಬಳಗವು ಮೊದಲ ಇನಿಂಗ್ಸ್‌ನಲ್ಲಿ 135 ರನ್‌ಗಳ ಮುನ್ನಡೆ ಗಳಿಸಿತ್ತು.

ಬುಧವಾರ ಬೆಳಿಗ್ಗೆ 80 ನಿಮಿಷಗಳವರೆಗೆ ಆಡಿದ ಕರ್ನಾಟಕ ಬ್ಯಾಟ್ಸ್‌ಮನ್‌ಗಳು 106 ರನ್‌ಗಳನ್ನು ಗಳಿಸಿತು. ಮಿಥುನ್ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್ ಬಾರಿಸಿ 17 ಎಸೆತಗಳಲ್ಲಿ 33 ರನ್‌ ಗಳಿಸಿದರು.

ಕರ್ನಾಟಕ ನೀಡಿದ 355 ರನ್‌ಗಳ ಗೆಲುವಿನ ಗುರಿ ತಲುಪಲು ವಿಫಲವಾದ ಛತ್ತೀಸಗಡ 156ರನ್‌ ಗಳಿಸುವಷ್ಟರಲ್ಲಿ ಆಲೌಟ್‌ ಆಯಿತು.

ಮೊದಲ ಇನಿಂಗ್ಸ್
ಕರ್ನಾಟಕ: 418ರನ್‌ಗಳಿಗೆ ಆಲೌಟ್‌
ಛತ್ತೀಸಗಡ: 283ರನ್‌ಗಳಿಗೆ ಆಲೌಟ್‌

ಎರಡನೇ ಇನಿಂಗ್ಸ್
ಕರ್ನಾಟಕ: 49.3 ಓವರ್‌ಗಳಲ್ಲಿ 7 ವಿಕೆಟ್‌ಗೆ 219ರನ್‌
ಮನೀಷ್ ಪಾಂಡೆ ಔಟಾಗದೆ 102ರನ್‌, ಶ್ರೇಯಸ್ ಗೋಪಾಲ್  22ರನ್‌, ಅಭಿಮನ್ಯು ಮಿಥುನ್ ಔಟಾಗದೆ 33

ಛತ್ತೀಸಗಡ: 57 ಓವರ್‌ಗಳಲ್ಲಿ 156ರನ್‌ಗೆ ಆಲೌಟ್‌
ಅವನೀಶ್ ಸಿಂಗ್ 61ರನ್‌, ಅಮನದೀಪ್ 35ರನ್‌
ಅಭಿಮನ್ಯು ಮಿಥುನ್ 1ವಿಕೆಟ್‌, ರೋನಿತ್ ಮೋರೆ 4 ವಿಕೆಟ್‌, ಶ್ರೇಯಸ್ ಗೋಪಾಲ್ 4ವಿಕೆಟ್‌

ಫಲಿತಾಂಶ: ಕರ್ನಾಟಕ ತಂಡಕ್ಕೆ 198 ರನ್‌ಗಳಿಂದ ಜಯ.
ಪಂದ್ಯದ ಆಟಗಾರ: ರೋನಿತ್ ಮೋರೆ
ಮುಂದಿನ ಪಂದ್ಯ: ಅಕ್ಟೋಬರ್ 7ರಿಂದ, ಬರೋಡಾ ವಿರುದ್ಧ, ಸ್ಥಳ: ವಡೋದರ

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !