ವೈದ್ಯರ ಸಲಹೆ ಪಡೆದು ಔಷಧಿ ಬಳಸಿ

7
ಕ್ಯಾನ್ಸರ್ ಉಚಿತ ತಪಾಸಣ ಶಿಬಿರದಲ್ಲಿ ಡಾ.ಮೋಕ್ಷದಾಯಣಿ ಸಲಹೆ

ವೈದ್ಯರ ಸಲಹೆ ಪಡೆದು ಔಷಧಿ ಬಳಸಿ

Published:
Updated:
Prajavani

ಶಿರಾ: ವೈದ್ಯರ ಸಲಹೆ ಇಲ್ಲದೆ ನಿರಂತರವಾಗಿ ವಿವಿಧ ಬಗೆಯ ಮಾತ್ರೆಗಳ ಸೇವನೆಯಿಂದ ಮಹಿಳೆಯರಲ್ಲಿ ಗರ್ಭಕೋಶ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಆದ್ದರಿಂದ ವೈದ್ಯರ ಸಲಹೆಯಂತೆ ಔಷಧಿಗಳನ್ನು ಬಳಸುವುದು ಸೂಕ್ತ ಎಂದು ಸ್ತ್ರೀರೋಗ ತಜ್ಞ ಡಾ.ಮೋಕ್ಷದಾಯಣಿ ಹೇಳಿದರು.

ತಾಲ್ಲೂಕಿನ ದ್ವಾರನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶ್ರೀದೇವಿ ಮೆಡಿಕಲ್ ಕಾಲೇಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಆಸ್ಪತ್ರೆ ಶಿರಾ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಕ್ಯಾನ್ಸರ್ ಉಚಿತ ತಪಾಸಣ ಶಿಬಿರದಲ್ಲಿ ಮಾತನಾಡಿದರು.

ಕ್ಯಾನ್ಸರ್ ರೋಗಿಗಳ ಸಂಖ್ಯೆಯಲ್ಲಿ ರಾಜ್ಯ 5ನೇ ಸ್ಥಾನದಲ್ಲಿದೆ. ತಂಬಾಕು ಸೇವನೆ ತ್ಯಜಿಸಿ, ಸರಳ ಆಹಾರ ಪದ್ಧತಿ ಅನುಕರಣೆ ಮಾಡಿದರೆ ರೋಗ ಸುಳಿಯದಂತೆ ನೋಡಿಕೊಳ್ಳಬಹುದು. ತಾಯಂದಿರು ಸ್ಥನ ಮತ್ತು ಗರ್ಭಕೋಶ ಕ್ಯಾನ್ಸರ್ ಬಗ್ಗೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕ್ಯಾನ್ಸರ್‌ ಬಗ್ಗೆ ಸದಾ ಜಾಗೃತಿಯಿಂದ ಇರಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ರಾಮಕೃಷ್ಣ ಶಿಬಿರವನ್ನು ಉದ್ಘಾಟಿಸಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ಅಫ್ಜಲ್ ಉರ್ ರಹಮಾನ್, ದ್ವಾರನಕುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ತಿಮ್ಮರಾಜು, ಶ್ರೀದೇವಿ ಮೆಡಿಕಲ್ ಕಾಲೇಜ್ ವೈದ್ಯರಾದ ಡಾ.ಮಾಳವಿಕಾ, ಡಾ.ಮೈತ್ರಿ, ಡಾ.ಮಾಲಿನಿ, ಡಾ.ನಿರಜ್, ತಾ.ಪಂ ಸದಸ್ಯೆ ವಸುಧಾ ತಿಪ್ಪೇಶ್‌ಗೌಡ, ದ್ವಾರನಕುಂಟೆ ಗ್ರಾ.ಪಂ ಅಧ್ಯಕ್ಷ ನರಸಿಂಹಯ್ಯ, ಮಾಜಿ ಉಪಾಧ್ಯಕ್ಷೆ ಜಯಮ್ಮ ಕೃಷ್ಣಮೂರ್ತಿ, ಆರೋಗ್ಯ ಇಲಾಖೆಯ ತಿಮ್ಮರಾಜು, ಶ್ರೀರಾಮ್, ಕಿಶೋರ್ ಅಹಮದ್, ನರಸಿಂಹಮೂರ್ತಿ, ಮಂಜುನಾಥ್ ಸ್ವಾಮಿ ಇದ್ದರು.

ಶಿಬಿರದಲ್ಲಿ ವಿವಿಧ ಗ್ರಾಮಗಳಿಂದ ಬಂದಿದ ಮಹಿಳೆಯರಿಗೆ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ತಪಾಸಣೆ ನಡೆಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !