‘ಹೆಣ್ಣು ಭ್ರೂಣಹತ್ಯೆ ತಡೆಗೆ ಜಾಗೃತಿ ಅವಶ್ಯ’

7

‘ಹೆಣ್ಣು ಭ್ರೂಣಹತ್ಯೆ ತಡೆಗೆ ಜಾಗೃತಿ ಅವಶ್ಯ’

Published:
Updated:
Prajavani

ಮಂಡ್ಯ: ‘ಗಂಡು-ಹೆಣ್ಣಿನ ಅನುಪಾತದಲ್ಲಿ ಮಂಡ್ಯ ಜಿಲ್ಲೆ ಮೂರನೇ ಸ್ಥಾನದಲ್ಲಿದ್ದು, ಹೆಣ್ಣು ಭ್ರೂಣ ಹತ್ಯೆ ತಡೆಯಲು ಪ್ರತಿಯೊಬ್ಬರೂ ಜಾಗೃತಿ ಹೊಂದುವ ಅಗತ್ಯವಿದೆ’ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಎಚ್.ಪಿ.ಮಂಜೇಗೌಡ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಇಲಾಖೆ ಕಚೇರಿ ಆವರಣದಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಕುರಿತು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಹೆಣ್ಣು ಮಕ್ಕಳ ರಕ್ಷಣೆಗಾಗಿ ದೇಶದಾದ್ಯಂತ ಕಾಲ್ನಡಿಗೆ ಮೂಲಕ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಗಂಡು– ಹೆಣ್ಣು ಮಕ್ಕಳ ಅನುಪಾತದಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಾಥಾ ಪೂರಕವಾಗಿದೆ. ಮಂಡ್ಯ ಜಿಲ್ಲೆ ಹಣ್ಣು ಭ್ರೂಣ ಹತ್ಯೆಯಲ್ಲಿ ಮೂರನೇ ಸ್ಥಾನ ಹೊಂದಿದ್ದು, ಇದರ ವಿರುದ್ಧ ನಾವು ಹೋರಾಟ ಮಾಡಬೇಕು. ಶಿಕ್ಷಣ ಪಡೆದ ಬಾಲಕಿಯರು ಹಾಗೂ ಮಹಿಳೆಯರು ಅನಕ್ಷರಸ್ಥ ಕುಟುಂಬಗಳಿಗೆ ಜಾಗೃತಿ ಮೂಡಿಸಬೇಕು’ ಎಂದರು ಹೇಳಿದರು.

ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ.ಬಿ.ಎನ್.ಪ್ರಭಾವತಿ ಮಾತನಾಡಿ ‘ಗಂಡು, ಹೆಣ್ಣು ಪ್ರಕೃತಿ ಹಾಗೂ ಸಮಾಜದ ಮುಂದೆ ಸಮಾನರಾಗಿದ್ದಾರೆ. ಆದರೆ ಹೆಣ್ಣಿನ ಮೇಲೆ ತಾಯಿಯ ಗರ್ಭದಿಂದಲೆ ಶೋಷಣೆ ಪ್ರಾರಂಭವಾಗಿ ಸಾಯುವವರೆಗೂ ಮುಂದುವರಿಯುತ್ತದೆ. ಹೆಣ್ಣನ್ನು ಶೋಷಣೆ ಮುಕ್ತಗೊಳಿಸಲು ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಾ ಮಹಿಳೆಯರಿಗೆ ಜಾಗೃತಿ ಮೂಡಿಸಬೇಕು’ ಎಂದರು.

ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಕಾರ್ಯದರ್ಶಿ ಡಾ.ಬಿ.ಎ.ಲಕ್ಷ್ಮಿ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಮರೀಗೌಡ, ವೈದ್ಯಾಧಿಕಾರಿಗಳಾದ ಡಾ.ವಿ.ಎಲ್.ನಂದೀಶ್, ಡಾ.ಎಚ್.ಸಿ.ಸವಿತಾ, ಡಾ.ನಾಗರಾಜು, ಡಾ.ಬಿ.ಎಸ್.ಕಕ್ಕಿಲಾಯ, ಡಾ.ವಸುಮತಿರಾವ್ ಇದ್ದರು.

ಮಿಮ್ಸ್ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಯಿಂದ ಹೊರಟು, ಬೆಂಗಳೂರು–ಮೈಸೂರು ರಾಷ್ಟ್ರಿಯ ಹೆದ್ದಾರಿ ಮೂಲಕ ಸಾಗಿ ಸಂಜಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !