ಚಿಣ್ಣರಿಗೆ ಮಾತೃ ಭೋಜನ

7

ಚಿಣ್ಣರಿಗೆ ಮಾತೃ ಭೋಜನ

Published:
Updated:
Prajavani

ಬೆಂಗಳೂರು: ಹೆಸರಘಟ್ಟ ಸಮೀಪ ದಾಸನಪುರ ಹೋಬಳಿಯ ತೋಟಗೆರೆ ಗ್ರಾಮದಲ್ಲಿರುವ ಆದಿಚುಂಚನಗಿರಿ ಪ್ರಾಥಮಿಕ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಮಾತೃಭೋಜನ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳ ಪೋಷಕರು ಅಡುಗೆ ಮಾಡಿಕೊಂಡು ಬಂದು ವಿದ್ಯಾರ್ಥಿಗಳಿಗೆ ಉಣ ಬಡಿಸುವ ಕಾರ್ಯಕ್ರಮವಿದು. ಹೊಳಿಗೆ, ಪಾಯಸ, ಕೇಸರಿ ಬಾತ್‌, ಬೋಂಡ, ಮಜ್ಜಿಗೆ, ಪುಳಿಯೋಗರೆ ಹೀಗೆ ವಿವಿಧ ತಿಂಡಿಗಳನ್ನು ಮಾಡಿಕೊಂಡು ಬಂದ ಪೋಷಕರು ಚಿಣ್ಣರಿಗೆ ಕೈ ತುತ್ತು ನೀಡಿ ಸಂಭ್ರಮಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ‘ಏಕತೆಯನ್ನು ಮಕ್ಕಳಲ್ಲಿ ಕಾಣಬೇಕು. ಅವರ ಮನಸ್ಸು ತೆರೆದ ಹಾಳೆ. ಆ ಹಾಳೆಯ ಮೇಲೆ ಒಳ್ಳೆಯದನ್ನು ನಾವು ಬರೆಯಬೇಕು’ ಎಂದರು.

ಹೆಸರಘಟ್ಟ ಸ್ಪರ್ಶ ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ ಗೋಪಿನಾಥ್ ಮಾತನಾಡಿ, ‘ನಮ್ಮ ಸಂಸ್ಕೃತಿಯ ತಾಯಿ ಬೇರು ಅತಿಥಿ ಸತ್ಕಾರದಲ್ಲಿದೆ. ಭಾರತೀಯ ಮಹಿಳೆಯರಿಗೆ ಅಡುಗೆ ಮಾಡಿ, ಊಟ ಬಡಿಸುವುದರಲ್ಲಿ ಒಂದು ಸಂಭ್ರಮ ಇದೆ’ ಎಂದರು.

ಪ್ರಾಂಶುಪಾಲರಾದ ಆನಂದ್, ‘ಪೋಷಕರು ಮತ್ತು ಮಕ್ಕಳ ನಡುವೆ ಪ್ರೀತಿಯ ಬೆಸುಗೆ ಹಾಕಲು ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತದೆ. ಸುಮಾರು 500 ಪೋಷಕರು ರುಚಿಯಾದ ಅಡುಗೆಯೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !