ವಾಹನ ಅಪಘಾತ: ಮೂವರ ಸಾವು

7

ವಾಹನ ಅಪಘಾತ: ಮೂವರ ಸಾವು

Published:
Updated:
Prajavani

ಹೊಸಕೋಟೆ: ಕೋಲಾರ ರಸ್ತೆಯ ಚನ್ನಾಪುರ ಗೇಟ್ ಬಳಿ ಟಾಟಾ ಸಫಾರಿ ವಾಹನವೊಂದು ಬುಧವಾರ ಬೆಳಗಿನ ಅಪಘಾತಕ್ಕೊಳಗಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಆಂಧ್ರಪ್ರದೇಶದ ಪಶ್ವಿಮ ಗೋದಾವರಿ ಜಿಲ್ಲೆ ದುದ್ದಕೇರು ಗ್ರಾಮದ ಶ್ರೀರೇಖಾ(32),ಶ್ರೀಲತಾ(37) ಮತ್ತು ಚಾಲಕ ಶ್ರೀನಾಥ್ ಅಲ್ಲೂರು (42) ಮೃತಪಟ್ಟವರು.

ವಾಹನದಲ್ಲಿದ್ದ ಶ್ರೀಲತಾ ಅವರ ಪತಿ ಬಾಲ ಕಿಶೋರ್, ಪುತ್ರಿ ವರ್ಷಿಣಿ, ಶ್ರೀರೇಖಾ ಅವರ ಪುತ್ರ ಯಜ್ಞೇಶ್ ಗಾಯಗೊಂಡಿದ್ದು ಅವರನ್ನು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸಾಫ್ಟ್‌ವೇರ್‌ ಎಂಜಿನಿಯರ್ ಆಗಿರುವ ಬಾಲ ಕಿಶೋರ್ ಟಿಸಿಎಸ್ ಕಂಪನಿಯ ಉದ್ಯೋಗಿ.

ವೈಟ್‌ಫೀಲ್ಡ್‌ ಬಳಿಯ ಇಮ್ಮಡಿಹಳ್ಳಿಯಲ್ಲಿ ವಾಸವಾಗಿದ್ದರು. ಕುಟುಂಬ ಸಮೇತ ಬಾಲಕಿಶೋರ್ ತಮ್ಮ ಸ್ವಂತ ಗ್ರಾಮಕ್ಕೆ ಹೋಗಿದ್ದರು. ಅಲ್ಲಿಂದ ಮಂಗಳವಾರ ಸಂಜೆ ತಮ್ಮ ನಾದಿನಿಯನ್ನು ಕರೆದುಕೊಂಡು ಬೆಂಗಳೂರಿಗೆ ಹಿಂದಿರುಗುತ್ತಿದ್ದಾಗ ಈ ಅವಘಡ ನಡೆದಿದೆ.

ವಾಹನ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆಯ ಇನ್ನೊಂದು ಭಾಗದಲ್ಲಿ ಮಗುಚಿ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !