ಧಾರ್ಮಿಕ ಭಾವನೆಗಳಿಗೆ ರಾಜಕೀಯ ಬಣ್ಣ ಬೇಡ: ಅಯ್ಯಪ್ಪ ಭಕ್ತರ ಆಗ್ರಹ

7

ಧಾರ್ಮಿಕ ಭಾವನೆಗಳಿಗೆ ರಾಜಕೀಯ ಬಣ್ಣ ಬೇಡ: ಅಯ್ಯಪ್ಪ ಭಕ್ತರ ಆಗ್ರಹ

Published:
Updated:
Prajavani

ಮೂಡಿಗೆರೆ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಋತುಸ್ರಾವ ವಯಸ್ಸಿನ ಮಹಿಳೆಯರು ಪ್ರವೇಶ ಮಾಡಿದ್ದನ್ನು ಖಂಡಿಸಿ ಬುಧವಾರ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಹಾಗೂ ಭಕ್ತರು ಮೌನ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಮೂಲಕ ರಾಷ್ಟ್ರಪತಿಗೆ ಮನವಿಪತ್ರ ನೀಡಿದರು.

ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದಿಂದ ಮೆರವಣಿಗೆ ಹೊರಟ ಭಕ್ತರು, ತಾಲ್ಲೂಕು ಕಚೇರಿಯಲ್ಲಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಜರಂಗದಳ ತಾಲ್ಲೂಕು ಸಂಚಾಲಕ ಅವಿನಾಶ್ ಮಾತನಾಡಿ, ‘ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವನ್ನು ರಾಜಕೀಯ ದುರುದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದು, ರಾತ್ರೋರಾತ್ರಿ ಇಬ್ಬರು ಮಹಿಳೆಯರಿಗೆ ಪುರುಷ ವೇಷ ಹಾಕಿಸುವ ಮೂಲಕ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಾರೆ. ಇದರ ಹಿಂದೆ ಅಲ್ಲಿನ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿರುವ ಶಂಕೆಯಿದ್ದು, ತನಿಖೆ ನಡೆಸಬೇಕು. ಕೇರಳದಲ್ಲಿ ದೈವ ಭಕ್ತಿ ಇರುವ ಯಾವೊಬ್ಬ ಮಹಿಳೆಯು ದೇವಾಲಯ ಪ್ರವೇಶಕ್ಕೆ ಆಸಕ್ತಿ ತೋರಿಸುತ್ತಿಲ್ಲ. ರಾಜಕೀಯ ನಡೆಸುವ ಉದ್ದೇಶದಿಂದ ದೇವಾಲಯ ಪ್ರವೇಶ ಮಾಡಿ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗುತ್ತಿದೆ. ಕೂಡಲೇ ರಾಷ್ಟ್ರಪತಿಗಳು ಕೇರಳ ಸರ್ಕಾರವನ್ನು ವಜಾಗೊಳಿಸಿ, ಅಯ್ಯಪ್ಪ ಭಕ್ತರಿಗೆ ರಕ್ಷಣೆ ನೀಡುವ ಮೂಲಕ, ಶಬರಿಮಲೆ ಪರಂಪರೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಅಯ್ಯಪ್ಪಸ್ವಾಮಿ ದೇವಾಲಯದ ಉಪಾಧ್ಯಕ್ಷ ನರೇಂದ್ರಶೆಟ್ಟಿ ಮಾತನಾಡಿ, ‘ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯವು ದೇಶದಾದ್ಯಂತ ಕೋಟ್ಯಂತರ ಮಂದಿ ಭಕ್ತರನ್ನು ಒಳಗೊಂಡಿದ್ದು, ತನ್ನದೇ ಆದ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿದೆ. ಇಂತಹ ದೇವಾಲಯವನ್ನು ರಾಜಕೀಯ ದಾಳವಾಗಿ ಬಳಸಿಕೊಳ್ಳುವುದು ಕೇರಳ ಸರ್ಕಾರಕ್ಕೆ ಶೋಭೆ ತರುವುದಿಲ್ಲ. ದೇವಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಬ್ಬರು ದೇವಾಲಯ ಪ್ರವೇಶಿಸಿದ್ದು, ಈ ಪ್ರವೇಶದ ಹಿಂದೆ ಅಲ್ಲಿನ ಸರ್ಕಾರದ ಕೈವಾಡವಿರುವುದನ್ನು ತಳ್ಳಿ ಹಾಕುವಂತಿಲ್ಲ. ಕೇರಳ ಸರ್ಕಾರವು ದೇವಾಲಯದ ಪರಂಪರೆಗೆ ಅನುಗುಣವಾಗಿ ಪ್ರವೇಶ ನೀಡಲು ಆದೇಶಿಸುವಂತೆ ಸುಪ್ರಿಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು’ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಂ.ಸಿ.ಸುದರ್ಶನ್, ರಘು ಪೂಜಾರಿ, ವೆಂಕಟೇಶ್ ಬಾಪುನಗರ, ಅಜಿತ್, ಸಚ್ಚಿನ್, ಪರಮೇಶ್, ಕಣಚೂರು ಆನಂದ, ಪ್ರಸನ್ನ, ರಾಜು, ಅನಿಲ್, ರಾಜೇಂದ್ರ, ರಮೇಶ್, ಚಿರಾಗ್, ಮಿಥುನ್ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !