ಕೋರ ಗ್ರಾಮದಲ್ಲಿ ನಿಲ್ಲದ ಬಸ್: ವಿದ್ಯಾರ್ಥಿಗಳ ಪರದಾಟ

7

ಕೋರ ಗ್ರಾಮದಲ್ಲಿ ನಿಲ್ಲದ ಬಸ್: ವಿದ್ಯಾರ್ಥಿಗಳ ಪರದಾಟ

Published:
Updated:
Prajavani

ಕೋರ: ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಕೋರ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲುಗಡೆ ಮಾಡದೆ ತೆರಳುತ್ತಿರುವುದರಿಂದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಿತ್ಯ ಪರಿತಪಿಸುವಂತಾಗಿದೆ.

ತುಮಕೂರು– ಶಿರಾ ಮಾರ್ಗವಾಗಿ ನಿತ್ಯ ನೂರಾರು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ. ಆದರೂ ಕೋರ ಗ್ರಾಮದ‌ ವಿದ್ಯಾರ್ಥಿಗಳ ಬವಣೆ ಮಾತ್ರ ನೀಗಿಲ್ಲ. ವಿದ್ಯಾರ್ಥಿಗಳು ಬಸ್‌ಪಾಸ್ ಪಡೆದರೂ ಪ್ರಯೋಜನಕ್ಕೆ ಬಾರದಾಗಿದೆ. ಶಿರಾದಿಂದ ತುಮಕೂರಿಗೆ ತೆರಳುವ ಬಸ್‌ಗಳು ಸರ್ವೀಸ್ ರಸ್ತೆಯಲ್ಲಿ ಬಂದರೂ ನಿಲುಗಡೆ ನೀಡದೆ ತೆರಳುತ್ತಿರುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ.

ಈ ಬಗ್ಗೆ ವಿದ್ಯಾರ್ಥಿಗಳು ಪ್ರಶ್ನಿಸಿದರೆ ‘ಬರೀ ಪಾಸ್‌ನವರನ್ನು ತುಂಬಿಕೊಂಡರೆ ಇಲಾಖೆಗೆ ಲೆಕ್ಕ ನೀಡುವುದಾದರೂ ಹೇಗೆ’ ಎಂಬ ಮಾತುಗಳೂ ಕೆಲ ನಿರ್ವಾಹಕರಿಂದ ಕೇಳಿ ಬಂದಿವೆ.

‘ಈ ಅವ್ಯವಸ್ಥೆ ಕುರಿತು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದರೂ ಸಮಸ್ಯೆಗೆ ಪರಿಹಾರ ಲಭಿಸಿಲ್ಲ. ಪ್ರತಿಭಟನೆ ಮಾಡಿದ ಎರಡು ಮೂರು ದಿನ ಬಸ್‌ಗಳು ನಿಲುಗಡೆಯಾಗುತ್ತವೆ. ಬಳಿಕ ಯಥಾಸ್ಥಿತಿ ಮುಂದುವರಿಯುತ್ತಿದೆ’ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !