ಟ್ರಂಪ್ ಅಸ್ತವ್ಯಸ್ತ ಆಡಳಿತಕ್ಕೆ ಕಡಿವಾಣ

7

ಟ್ರಂಪ್ ಅಸ್ತವ್ಯಸ್ತ ಆಡಳಿತಕ್ಕೆ ಕಡಿವಾಣ

Published:
Updated:

ವಾಷಿಂಗ್ಟನ್ : ಆಡಳಿತ ಭಾಗಶಃ ಸ್ಥಗಿತಗೊಂಡಿದ್ದ ಅಮೆರಿಕದಲ್ಲಿ ಗುರುವಾರ ಹೊಸ ಶಕೆಯೊಂದು ಆರಂಭವಾಗಿದ್ದು, ಸರ್ಕಾರ ಅಧಿಕೃತವಾಗಿ ವಿಭಜನೆಗೊಂಡಿದೆ. ಅಂದರೆ ಇನ್ನು ಅಮೆರಿಕ ಸಂಸತ್ತಿನ ಮೇಲೆ ಡೆಮಾಕ್ರಟಿಕ್ ಪಕ್ಷದವರು ಸಹ ನಿಯಂತ್ರಣ ಹೊಂದಿರುತ್ತಾರೆ.

ಇದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಸ್ತವ್ಯಸ್ತದ ಆಡಳಿತಕ್ಕೆ ಕನಿಷ್ಠ 2020ರ ಚುನಾವಣೆ ತನಕ ಕಡಿವಾಣ ಹಾಕುವಂತಹ ಬೆಳವಣಿಗೆಯಾಗಿದೆ. 

2016ರಲ್ಲಿ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ನಿರುತ್ಸಾಹಗೊಂಡಿದ್ದ ಡೆಮಾಕ್ರಟಿಕ್ ಪಕ್ಷದವರಿಗೆ ಈ ಬೆಳವಣಿಗೆಯಿಂದ ಭಾರಿ ಉತ್ತೇಜನ ದೊರಕಿದಂತಾಗಿದೆ. 

ಟ್ರಂಪ್ ಅವಧಿಯಲ್ಲಿ ಮಿತಿ ಮೀರಿ ಅಧಿಕಾರ ದುರ್ಬಳಕೆಯಾಗಿದೆ ಎನ್ನುವುದು ಡೆಮಾಕ್ರಟಿಕ್ ಪಕ್ಷದವರ ಅಭಿಪ್ರಾಯ. 

ಟ್ರಂಪ್‌ ಅವರ ಆದಾಯ ತೆರಿಗೆ, ಅಟಾರ್ನಿ ಜನರಲ್ ಆಗಿ ಜೆಫ್ ಸೆಷನ್ಸ್‌ ಅವರನ್ನು ನೇಮಿಸಿದ ನಿರ್ಧಾರ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆಗಿನ ಬಾಂಧವ್ಯ ಕುರಿತು ತನಿಖೆ ನಡೆಸುವುದಾಗಿ ಡೆಮಾಕ್ರಟಿಕ್ ಸಮಿತಿಗಳು ಪಣ ತೊಟ್ಟಿದ್ದವು. ಇದೀಗ ಅವರಿಗೆ ಈ ತನಿಖೆ ನಡೆಸಲು ಅವಕಾಶ ದೊರಕಿದಂತಾಗುತ್ತದೆ.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !