ಚನ್ನಮ್ಮ ವಿಜಯ ಜ್ಯೋತಿ ಯಾತ್ರೆ ಜ.6 ರಿಂದ

7

ಚನ್ನಮ್ಮ ವಿಜಯ ಜ್ಯೋತಿ ಯಾತ್ರೆ ಜ.6 ರಿಂದ

Published:
Updated:

ಬಾಗಲಕೋಟೆ: ‘ಜಿಲ್ಲಾ ಮಟ್ಟದ ಪಂಚಮಸಾಲಿ ಸಮಾವೇಶದ ಹಿನ್ನೆಲೆಯಲ್ಲಿ ಜನವರಿ 6 ರಿಂದ ಜನವರಿ 22ರ ವರೆಗೆ ಚನ್ನಮ್ಮ ವಿಜಯ ಜ್ಯೋತಿ ಯಾತ್ರೆ ಜಿಲ್ಲೆಯಾದ್ಯಂತ ಸಂಚರಿಸಲಿದೆ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

‘ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದಿಂದ ಹುನಗುಂದದಲ್ಲಿ ಜನವರಿ 22 ರಂದು ಜಿಲ್ಲಾಮಟ್ಟದ ತೃತೀಯ ಪಂಚಮಸಾಲಿ ಸಮಾವೇಶ, ಕಿತ್ತೂರುರಾಣಿ ಚನ್ನಮ್ಮ ಅವರ 240ನೇ ಜಯಂತ್ಯೋತ್ಸವ ಹಾಗೂ 195ನೇ ವಿಜಯೋತ್ಸವ ಹಮ್ಮಿಕೊಳ್ಳಲಾಗಿದೆ’ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಂಚರಿಸಲಿರುವ ವಿಜಯ ಜ್ಯೋತಿ ಯಾತ್ರೆ ಚನ್ನಮ್ಮನ ಸಂದೇಶ ಹಾಗೂ ಸಮುದಾಯ ಸಂಘಟನೆ ಕುರಿತು ಜನಜಾಗೃತಿ ಮೂಡಿಸಲಿದೆ’ ಎಂದರು.

‘ಜನವರಿ 7ರಂದು ಬೆಳಗ್ಗೆ 10ಕ್ಕೆ ಮಹಾಲಿಂಗಪುರದ ಪಂಚಮಸಾಲಿ ಸಮುದಾಯ ಭವನದಲ್ಲಿ ಜ್ಯೋತಿ ಯಾತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕರಾದ ಮುರಗೇಶ ನಿರಾಣಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಚಾಲನೆ ನೀಡಲಿದ್ದಾರೆ. ಜ್ಯೋತಿ ಯಾತ್ರೆ ಜನವರಿ 6, 7 ರಂದು ತೇರದಾಳ ಮತಕ್ಷೇತ್ರ, ಜನವರಿ 7, 8ರಂದು ಜಮಖಂಡಿ ಹಾಗೂ ಮುಧೋಳ ಮತಕ್ಷೇತ್ರ, ಜನವರಿ 10 ರಂದು ಬಾಗಲಕೋಟೆ ಹಾಗೂ ಬೀಳಗಿ ಮತಕ್ಷೇತ್ರಗಳಲ್ಲಿ ಸಂಚರಿಸಿ ಜನವರಿ 11, 19ರ ವರೆಗೆ ಹುನಗುಂದ ಮತಕ್ಷೇತ್ರದಲ್ಲಿ ಸಂಚರಿಸಲಿದೆ’ ಎಂದರು.

‘ಸಮಾವೇಶದಲ್ಲಿ ದಿ. ಪಿ.ಎಂ.ನಾಡಗೌಡರ ಹೆಸರಿನಲ್ಲಿ ಶಿಕ್ಷಣ, ಶಿವಸಂಗಪ್ಪ ಕಡಪಟ್ಟಿ ಹೆಸರಿನಲ್ಲಿ ರೈತ ಹಾಗೂ ದಿ. ಎಸ್.ಆರ್.ಕಾಶಪ್ಪನವರ ಹೆಸರಿನಲ್ಲಿ ಸಮಾಜ ಸೇವಾ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ’ ಎಂದರು.

ಸಮಾಜದ ಮುಖಂಡರಾದ ಎಸ್.ಎಂ.ರಾಂಪುರ, ಶಿವಕುಮಾರ ಗಂಗಲ್, ಎನ್.ಜಿ.ಕೋಟಿ, ಬಸವರಾಜ ಹನಗುಂಡಿ, ಚನ್ನವೀರಪ್ಪ ಅಂಗಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !