ದರ ಕಡಿತ: ರಸ್ತೆಗೆ ಹಾಲು ಚೆಲ್ಲಿ ಪ್ರತಿಭಟನೆ

7

ದರ ಕಡಿತ: ರಸ್ತೆಗೆ ಹಾಲು ಚೆಲ್ಲಿ ಪ್ರತಿಭಟನೆ

Published:
Updated:
Prajavani

ಕೊಪ್ಪ: ಮಂಡ್ಯ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮನ್‌ಮುಲ್‌) ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ ₹ 2 ಕಡಿತ ಕಡಿತಗೊಳಿಸಿರುವುದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ರಸ್ತೆಗೆ ಹಾಲು ಚೆಲ್ಲಿ ಪ್ರತಿಭಟನೆ ನಡೆಸಿದರು.

ಬೆಳೆಗಳಿಗೆ ಸಮರ್ಪಕ ಬೆಲೆ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದು ಅವರನ್ನು ಹೈನುಗಾರಿಕೆ ಸಂರಕ್ಷಣೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಮನ್‌ಮುಲ್‌ ಹಾಲಿನ ಖರೀದಿ ದರ ಕಡಿತಗೊಳಿಸಿದೆ. ಇಡೀ ರಾಜ್ಯದ ವಿವಿಧ ಒಕ್ಕೂಟಗಳಲ್ಲಿ ಮನ್‌ಮುಲ್‌ ಅತ್ಯಂತ ಕಡಿಮೆ ಬೆಲೆ ನೀಡುತ್ತಿತ್ತು. ಈಗ ಅದರಲ್ಲೂ ₹ 2 ಕಡಿತಗೊಳಿಸಿದೆ. ಕಷ್ಟದಲ್ಲಿರುವ ರೈತರ ಹೊಟ್ಟೆ ಮೇಲೆ ಬರೆ ಎಳೆಯಲಾಗಿದೆ. ಜಿಲ್ಲೆಯಲ್ಲಿ 7 ಮಂದಿ ಜೆಡಿಎಸ್ ಶಾಸಕರು ಇದ್ದರೂ ರೈತರ ಸಮಸ್ಯೆಗೆ ಸ್ಪಂದಿಸದಿರುವುದು ದುರಂತ. ಮನ್‌ಮುಲ್‌ ಕೂಡಲೇ ದರ ಕಡಿತ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ನಡುರಸ್ತೆಯಲ್ಲಿ ಹಾಲು ಚೆಲ್ಲಿದ ಕಾರಣ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮನ್‌ಮುಲ್‌ ಅಧ್ಯಕ್ಷ ಕದಲೂರು ರಾಮಕೃಷ್ಣ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಸಂಘಟನೆಯ ಮುಖಂಡರಾದ ಎಂ.ಮೂಗೂರೇಗೌಡ, ಬೆಸಗರಹಳ್ಳಿ ಮಹಮ್ಮದ್ ಇಲಿಯಾಜ್, ಆಬಲವಾಡಿ ಕುಮಾರ. ಗೂಳೂರುದೊಡ್ಡಿ ರಕ್ಷಿತ್‌, ಎಂ.ಡಿ. ಜಬೀವುಲ್ಲಾ. ರಾಜಶೇಖರ. ಪ್ರಭಾಕರ, ಯೋಗೇಶ್‌, ನಂಜಪ್ಪ, ಅರಗಿನಮೇಳೆ ರಾಮಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !