ಡಿಕ್ಕಿ: ಬೈಕ್ ಸವಾರ ಸಾವು

7

ಡಿಕ್ಕಿ: ಬೈಕ್ ಸವಾರ ಸಾವು

Published:
Updated:
Prajavani

ಸಾಸ್ವೆಹಳ್ಳಿ: ಹೋಬಳಿಯ ಗಡಿ ಭಾಗದ ಹನಗವಾಡಿ ಹಾಗೂ ವಡೇರಪುರ ಮಾರ್ಗ ಮಧ್ಯೆ ಎಸ್.ಎಚ್.115 ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಕಾರು ಬೈಕ್  ಡಿಕ್ಕಿಯಾಗಿ ಬೈಕ್ ಸವಾರ ಭದ್ರಾವತಿ ತಾಲ್ಲೂಕಿನ ಗುಡುಮಘಟ್ಟದ ಮಂಜಪ್ಪ (44) ಸ್ಥಳದಲ್ಲಿಯೇ ಮೃತಪಟ್ಟರು.

ಮೃತರು ಮೆಕ್ಕೆಜೋಳದ ವ್ಯಾಪಾರಿಯಾಗಿದ್ದು, ಲಿಂಗಾಪುರ ಹಾಗೂ ಸಾಸ್ವೆಹಳ್ಳಿ ಭಾಗಗಳಲ್ಲಿ ಮೆಕ್ಕೆಜೋಳ ತುಂಬಿಸಲು ಬರುತ್ತಿದ್ದಾಗ ಈ ಅಪಘಾತ ನಡೆದಿದೆ.

ಕಾರು ಚಾಲಕ ಹೊಸಳ್ಳಿ ಗ್ರಾಮದವನಾಗಿದ್ದು , ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಹೊಳೆಹೊನ್ನೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !