ಹರಿಹರ ಗ್ರಾಮದೇವತೆ ಉತ್ಸವಕ್ಕೆ ₹ 9.32 ಲಕ್ಷ ದೇಣಿಗೆ

7

ಹರಿಹರ ಗ್ರಾಮದೇವತೆ ಉತ್ಸವಕ್ಕೆ ₹ 9.32 ಲಕ್ಷ ದೇಣಿಗೆ

Published:
Updated:
Prajavani

ಹರಿಹರ: ನಗರದಲ್ಲಿ ಮಾರ್ಚ್‌ 26ರಿಂದ ಆರಂಭಗೊಳ್ಳಲಿರುವ ಗ್ರಾಮದೇವತೆ ಉತ್ಸವಕ್ಕೆ ದೇಣಿಗೆ ಸಂಗ್ರಹ ನಡೆಯುತ್ತಿದ್ದು, ಪ್ರಸ್ತುತ ₹ 9.32 ಲಕ್ಷ ದೇಣಿಗೆ ಸಂಗ್ರಹವಾಗಿದೆ ಎಂದು ಸಮಿತಿ ಅಧ್ಯಕ್ಷ ಪರಶುರಾಮ್‍ ಕಾಟ್ವೆ ತಿಳಿಸಿದರು.

ನಗರದ ಮಹಜೇನಹಳ್ಳಿ ಗ್ರಾಮದೇವತೆ ದೇವಸ‍್ಥಾನದಲ್ಲಿ ಶುಕ್ರವಾರ 6ನೇ ಬಾರಿಗೆ ಹುಂಡಿಯ ದೇಣಿಗೆ ಎಣಿಕೆ ಕಾರ್ಯದ ನಂತರ ಮಾತನಾಡಿದರು.

ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಗ್ರಾಮದೇವತೆ ದೇವಸ್ಥಾನದಲ್ಲಿ ದೇಣಿಗೆ ಸಂಗ್ರಹದ ಎಣಿಕೆ ಕಾರ್ಯ ನಡೆಸಲಾಗುವುದು. ಈ ಬಾರಿ ಕಿರೀಟಕ್ಕೆ ಬಂಗಾರದ ದೇಣಿಗೆ ಸೇರಿ ₹ 1.82 ಲಕ್ಷ ದೇಣಿಗೆ ಸಂಗ್ರವಾಗಿದೆ. 6 ವಾರಗಳಲ್ಲಿ ಒಟ್ಟು ₹ .9.32 ಲಕ್ಷ ದೇಣಿಗೆ ಸಂಗ್ರಹವಾಗಿದೆ ಎಂದು ಮಾಹಿತ ನೀಡಿದರು.

ನಗರದ ಮಹಜೇನಹಳ್ಳಿ ಭಾಗದಲ್ಲಿ 45 ದಿನಗಳಿಂದ ದೇಣಿಗೆ ಸಂಗ್ರಹ ಕಾರ್ಯ ನಡೆಯುತ್ತಿದೆ. ಕಳೆದ ಬಾರಿ ಗ್ರಾಮದೇವತೆಯ ಮೂರ್ತಿಗೆ ಕಿರೀಟ ನಿರ್ಮಿಸಲಾಗಿತ್ತು. ಈ ಬಾರಿ ಗ್ರಾಮದೇವತೆಯ ಮಕ್ಕಳ ಉತ್ಸವ ಮೂರ್ತಿಗಳಿಗೆ ಕಿರೀಟ ನಿರ್ಮಿಸುವ ಯೋಜನೆ ಇದೆ. ಈ ಕಿರೀಟ ನಿರ್ಮಾಣ ಕಾರ್ಯಕ್ಕೆ ಅಂದಾಜು ₹ 16 ಲಕ್ಷ ವೆಚ್ಚ ತಗಲುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.

ಸಮಿತಿಯ ಕಾರ್ಯದರ್ಶಿ ಗೌಡರ ಮಲ್ಲೇಶಪ್ಪ, ಖಜಾಂಚಿ ಷಣ್ಮುಖ, ಸಹ ಕಾರ್ಯದರ್ಶಿ ಹನುಮಂತಪ್ಪ ಇಂಗಳಗೊಂದಿ, ಕಸಬಾ ಮತ್ತು ಮಹಜೇನಹಳ್ಳಿ ಗೌಡರಾದ ಲಿಂಗರಾಜ್ ಪಾಟೀಲ್, ಚನ್ನಬಸಪ್ಪ, ವೆಂಕಟೇಶ್ ಶಾನುಭೋಗ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !