‘ಪಿಡಿಒಗಳಿಂದ ರಾಜಕೀಯ ಸಲ್ಲ’

7
ದೂರು ಬಂದಲ್ಲಿ ಕ್ರಮ ಕೈಗೊಳ್ಳುವಂತೆ ಸಿಇಒಗೆ ಸೂಚನೆ

‘ಪಿಡಿಒಗಳಿಂದ ರಾಜಕೀಯ ಸಲ್ಲ’

Published:
Updated:

ಬಾದಾಮಿ: ‘ಯಾರ್ರೀ ಅವ್ರು ಪಿಡಿಒಗಳು ಬರೀ ರಾಜಕೀಯ ಮಾಡ್ತಾರಂತೆ. ಅವರ ಮೇಲೆ ಬಹಳಷ್ಟು ದೂರು ಬಂದಿವೆ. ಸಿಇಒ ನೀವೇನು ಮಾಡ್ತಾ ಇದ್ದೀರಿ, ಯಾಕೆ ಇನ್ನೂ ಆಕ್ಷನ್ ತೆಗೆದುಕೊಂಡಿಲ್ಲ..

ಹೀಗೆಂದು ಶಾಸಕ ಸಿದ್ದರಾಮಯ್ಯ ಶುಕ್ರವಾರ ಇಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಊರಿನ ಅಭಿವೃದ್ಧಿ, ಜನರಿಗೆ ಸವಲತ್ತುಗಳನ್ನು ಕಲ್ಪಿಸುವುದು ಪಿಡಿಒಗಳ ಕೆಲಸ ಅದು ಬಿಟ್ಟು ರಾಜಕೀಯ ಮಾಡುವುದು ಸರಿಯಲ್ಲ. ಅದು ಯಾವ ಪಕ್ಷದ ಪರವಾಗಿ ಮಾಡಿದರು ತಪ್ಪು ಎಂದು ಹೇಳಿದ ಸಿದ್ದರಾಮಯ್ಯ, ಕೆಲಸ ಬಿಟ್ಟು ರಾಜಕೀಯ ಮಾಡುವ ಪಿಡಿಒಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಇಲ್ಲವೇ ಸಸ್ಪೆಂಡ್ ಮಾಡುವಂತೆ ಸಿಇಒಗೆ ಸೂಚಿಸಿದರು.

ತಾಲ್ಲೂಕಿನಲ್ಲಿ ನಾಲ್ವರು ಪಿಡಿಒಗಳ ವಿರುದ್ಧ ‘ರಾಜಕೀಯ ಮಾಡುತ್ತಾರೆ’ ಎಂದು ಗ್ರಾಮಸ್ಥರು ದೂರು ನೀಡಿದ್ದಾರೆ ಎಂದು ತಾಲ್ಲೂಕು ಪಂಚಾಯ್ತಿ ಇಒ ಭೀಮಪ್ಪ ಲಾಳಿ ಸಭೆಗೆ ಮಾಹಿತಿ ನೀಡಿದರು.

‘ಅವರ ವಿರುದ್ಧ ಇನ್ನೂ ಕ್ರಮ ಕೈಗೊಂಡಿಲ್ಲವೇಕೆ’ ಎಂದು ಸಿದ್ದರಾಮಯ್ಯ ಕೋಪದಿಂದಲೇ ಅಧಿಕಾರಿಗಳನ್ನು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !