ಮನೆ ಬಾಗಿಲಿಗೆ ‘ಸೇವಾ ಸಿಂಧು’

7
ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿನ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಆನ್‌ಲೈನ್ ಮೂಲಕ ತಲುಪಿಸುವ ಸೇವೆ

ಮನೆ ಬಾಗಿಲಿಗೆ ‘ಸೇವಾ ಸಿಂಧು’

Published:
Updated:
Prajavani

ಚಿಕ್ಕಬಳ್ಳಾಪುರ: ‘ಜಿಲ್ಲಾ ಕೇಂದ್ರಗಳಲ್ಲಿರುವ ವಿವಿಧ ಇಲಾಖೆಗಳ ಹಲವಾರು ಸೇವೆಗಳನ್ನು ನಾಗರಿಕರಿಗೆ ತಡೆ ರಹಿತವಾಗಿ ಒದಗಿಸುವ ಉದ್ದೇಶದಿಂದ ಮತ್ತು ಇಲಾಖೆಗಳ ದಕ್ಷತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಸೇವಾ ಸಿಂಧು (ಇ-ಜಿಲ್ಲೆ) ಯೋಜನೆ ಜಾರಿಗೆ ತರಲಾಗಿದೆ. ಇದನ್ನು ನಾಗರಿಕರು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್ ಹೇಳಿದರು.

ನಗರದಲ್ಲಿ ಶುಕ್ರವಾರ ಅಂಗವಿಲಕರು ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ವತಿಯಿಂದ ಸೇವಾ ಸಿಂಧು ಯೋಜನೆಯಡಿ ಹಿರಿಯ ನಾಗರಿಕರಿಗೆ ಕಾರ್ಡ್ ವಿತರಿಸಿ ಅವರು ಮಾತನಾಡಿದರು.

‘ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿನ ಸೇವೆಗಳನ್ನು ಜನರ ಮನೆ ಬಾಗಿಲಿಗೆ ಆನ್‌ಲೈನ್ ಮೂಲಕ ತಲುಪಿಸುವ ಸೇವೆ ಇದಾಗಿದೆ. ಜಾತಿ ಮತ್ತು ಆದಾಯ ಪತ್ರ, ಜನನ ಮರಣ ಪ್ರಮಾಣ, ವೃದ್ಧಾಪ್ಯ, ವಿಧವಾ ಪ್ರಮಾಣ ಪತ್ರಗಳು ಸೇರಿದಂತೆ ವಿವಿಧ ಅರ್ಜಿಗಳನ್ನು ಸಲ್ಲಿಸಲು ಅನುಕೂಲ ಮಾಡಿಕೊಡಲಾಗಿದೆ’ ಎಂದು ಹೇಳಿದರು.

‘ರಾಷ್ಟ್ರೀಯ ಇ-ಆಡಳಿತ ಯೋಜನೆಯ ಭಾಗವಾದ ಈ ಯೋಜನೆಗೆ ಭಾರತ ಸರ್ಕಾರದ ವಿದ್ಯುನ್ಮಾನ, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ನೋಡಲ್ ಇಲಾಖೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈವರೆಗೆ ವಿವಿಧ ಇಲಾಖೆಗಳ 346 ನಾಗರಿಕ ಸೇವೆಗಳನ್ನು ಸೇವಾ ಸಿಂಧು ಯೋಜನೆಯಡಿ ಸಂಯೋಜಿಸಲು ಗುರುತಿಸಲಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 62 ಸಾಮಾನ್ಯ ಸೇವಾ ಕೇಂದ್ರಗಳು ಸೇವಾ ಸಿಂಧು ಯೋಜನೆಯಡಿ ನೋಂದಾಯಿಸಿಕೊಂಡು ಸೇವೆಗಳನ್ನು ಒದಗಿಸುತ್ತಿವೆ. ಸರ್ಕಾರವು ವಿವಿಧ ಇಲಾಖೆಗಳ ಮೂಲಕ ನೀಡುತ್ತಿರುವ 346 ಸೇವೆಗಳನ್ನು ಈ ಯೋಜನೆಯಡಿ ವಿಲೀನಗೋಳಿಸಲು ತೀರ್ಮಾನಿಸಿದೆ. ಅದರಂತೆ ಪ್ರಸ್ತುತ 14 ಇಲಾಖೆಗಳ 70 ಸೇವೆಗಳು ದೊರೆಯುತ್ತಿವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !