ಒಂದು ಕುರ್ಚಿಗೆ ಇಬ್ಬರು ವೈದ್ಯರ ಕಿತ್ತಾಟ

7

ಒಂದು ಕುರ್ಚಿಗೆ ಇಬ್ಬರು ವೈದ್ಯರ ಕಿತ್ತಾಟ

Published:
Updated:
Prajavani

ಮದ್ದೂರು: ಪಟ್ಟಣದ ಕೆ. ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಹುದ್ದೆಗೆ ಇಬ್ಬರು ವೈದ್ಯರು ಕಿತ್ತಾಡುತ್ತಿದ್ದು ರೋಗಿಗಳು ಪರದಾಡುವಂತಾಗಿದೆ. ಆಸ್ಪತ್ರೆ ಸಿಬ್ಬಂದಿ ಯಾರ ಮಾತು ಕೇಳಿ ಕೆಲಸ ಮಾಡಬೇಕು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಹುದ್ದೆಗಾಗಿ ಡಾ.ಶಶಿಕಲಾ ಮತ್ತು ಡಾ.ಮುರುಳಿ ಕೃಷ್ಣ ಅವರ ನಡುವೆ ಕಿತ್ತಾಟ ನಡೆಯುತ್ತಿದೆ. ಎರಡೂವರೆ ವರ್ಷಗಳ ಹಿಂದೆ ಡಾ.ಶಶಿಕಲಾ ಅವರು ಪಟ್ಟಣದ ಆಸ್ಪತ್ರೆಗೆ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದರು. 2 ತಿಂಗಳ ಹಿಂದೆ ಡಾ.ಮುರಳಿಕೃಷ್ಣ ಮೂಳೆ ತಜ್ಞರಾಗಿ ವರ್ಗಾವಣೆಯಾಗಿ ಬಂದರು. ಅವರಿಗೆ ಈಗ ಆಡಳಿತ ವೈದ್ಯಾಧಿಕಾರಿ ಹುದ್ದೆಗೆ ಹೆಚ್ಚುವರಿಯಾಗಿ ನೇಮಕ ಮಾಡಿರುವುದು ಡಾ.ಶಶಿಕಲಾ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಮುಂದಿನ ಆದೇಶದವರೆಗೂ ಡಾ. ಮುರುಳಿಕೃಷ್ಣ ಅವರನ್ನು ಆಡಳಿತ ವೈದ್ಯಾಧಿಕಾರಿಯ ಹುದ್ದೆಯಲ್ಲಿ ಮುಂದುವರೆಯುವಂತೆ ಸರ್ಕಾರ ಸೂಚಿಸಿದೆ.

‘ನಾನು ಸರ್ಕಾರದ ಆದೇಶದ ವಿರುದ್ಧ ನಾನು ಕೆಎಟಿಗೆ ದೂರು ಸಲ್ಲಿಸಿದ್ದೇನೆ. ಕೆಎಟಿ ಆದೇಶಬರುವವರೆಗೂ ಇಲ್ಲಿಯೇ ಕಾರ್ಯ ನಿರ್ವಹಿಸುತ್ತೇನೆ. ಎರಡು ತಿಂಗಳ ಹಿಂದೆ ಬಂದವರು ನನ್ನ ಸ್ಥಳ ಆಕ್ರಮಿಸಿಕೊಂಡಿದ್ದಾರೆ’ ಎಂದು ಡಾ.ಶಶಿಕಲಾ ಹೇಳಿದರು.

ವೈದ್ಯಾಧಿಕಾರಿಗಳ ಜಗಳದಿಂದ ರೋಗಿಗಳು ಮತ್ತು ವೈದ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಡಳಿತ ವೈದ್ಯಾಧಿಕಾರಿ ಡಾ.ಮುರುಳಿ ಕೃಷ್ಣ ಅವರು ಮೂಳೆ ತಜ್ಞರಾಗಿದ್ದಾರೆ. ರೋಗಿಗಳು ಮೊದಲನೇ ಮಹಡಿಯ ಆಡಳಿತಾಧಿಕಾರಿ ಕಚೇರಿಗೆ ಚಿಕಿತ್ಸೆಗಾಗಿ ತೆರಳಲು ಪರದಾಡುತ್ತಿದ್ದಾರೆ. ಇಬ್ಬರ ಜಗಳದಿಂದ ರೋಗಿಗಳು ಬೇಸತ್ತಿದ್ದಾರೆ. ಸರ್ಕಾರ ಕೂಡಲೇ ಇಬ್ಬರ ಜಗಳಕ್ಕೂ ತೆರೆ ಎಳೆಯಬೇಕು ಎಂದು ರೋಗಿಯೊಬ್ಬರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !