ಪೂಜಾರಗೆ ಎ ಪ್ಲಸ್ ಶ್ರೇಣಿ ನೀಡಲು ಚಿಂತನೆ

7

ಪೂಜಾರಗೆ ಎ ಪ್ಲಸ್ ಶ್ರೇಣಿ ನೀಡಲು ಚಿಂತನೆ

Published:
Updated:
Prajavani

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಒಟ್ಟು ಮೂರು ಶತಕ ಹೊಡೆದಿರುವ ಚೇತೇಶ್ವರ್ ಪೂಜಾರ ಅವರಿಗೆ ಎ ಪ್ಲಸ್‌ ಶ್ರೇಣಿಯ ಗುತ್ತಿಗೆ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ.

ಸದ್ಯ ಅವರು ಎ ಶ್ರೇಣಿಯ ಗುತ್ತಿಗೆಯಲ್ಲಿದ್ದಾರೆ. ಈಗ ಅವರು ವಾರ್ಷಿಕ ಐದು ಕೋಟಿ ರೂಪಾಯಿ ಪಡೆಯುತ್ತಿದ್ದಾರೆ. ಎ ಪ್ಲಸ್‌  ದರ್ಜೆಗೆ ಏರಿದರೆ ಏಳು ಕೋಟಿ ರೂಪಾಯಿ ಲಭಿಸಲಿದೆ. ಬಿ ಮತ್ತು ಸಿ ದರ್ಜೆಯಲ್ಲಿರುವ ಆಟಗಾರರಿಗೆ ಕ್ರಮವಾಗಿ ಮೂರು ಮತ್ತು ಒಂದು ಕೋಟಿ ರೂಪಾಯಿ ನೀಡಲಾಗುತ್ತಿದೆ. 2018ರಲ್ಲಿ ಗುತ್ತಿಗೆ ನಿಯಮವನ್ನು ಪರಿಷ್ಕರಿಸಲಾಗಿತ್ತು.

ಆಸ್ಟ್ರೇಲಿಯಾದ ಸರಣಿಯಲ್ಲಿ ಪೂಜಾರ ನಾಲ್ಕು ಪಂದ್ಯಗಳಿಂದ 521 ರನ್‌ಗಳನ್ನು ಗಳಿಸಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದ ಪಂದ್ಯದಲ್ಲಿ ಅವರು ಮೂರನೇ ಕ್ರಮಾಂಕದಲ್ಲಿ ತಂಡಕ್ಕೆ  ಆಸರೆಯಾಗಿದ್ದಾರೆ. ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರಾಯ್, ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ. ಪ್ರಸಾದ್ ಮತ್ತು ನಾಯಕ ವಿರಾಟ್ ಕೊಹ್ಲಿ ಅವರು ಈ ಕುರಿತ ಪ್ರಸ್ತಾವವನ್ನು ಮಂಡಳಿಗೆ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.

 ‘ಪೂಜಾರ ಅವರನ್ನು ಮೇಲ್ದರ್ಜೆಯ ಗುತ್ತಿಗೆಗೆ ಬಡ್ತಿ ನೀಡುವುದು ಉತ್ತಮ ವಿಚಾರ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡುವವರಿಗೆ ಹೆಚ್ಚಿನ ಮಾನ್ಯತೆ ದೊರೆಯತ್ತದೆ ಎಂಬ ಸಂದೇಶವನ್ನು ಯುವ ಆಟಗಾರರಿಗೆ ಈ ಮೂಲಕ ನೀಡಬಹುದಾಗಿದೆ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !