ಸಾಲ ಮನ್ನಾ: ಪ್ರಧಾನಿ ಟೀಕೆಗೆ ದಿನೇಶ್‌ ಕಿಡಿ

7

ಸಾಲ ಮನ್ನಾ: ಪ್ರಧಾನಿ ಟೀಕೆಗೆ ದಿನೇಶ್‌ ಕಿಡಿ

Published:
Updated:

ಬೆಂಗಳೂರು: ‘ರಾಜ್ಯದ ರೈತರ ಸಾಲ ಮನ್ನಾ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಗೇಲಿ ಮಾಡಿದ್ದಾರೆ. ಅವರು ಇಲ್ಲಿಗೆ ಬಂದು ವಾಸ್ತವಾಂಶ ಅರಿಯಲಿ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸವಾಲು ಎಸೆದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ 66 ಸಾವಿರ ರೈತರಿಗೆ ಋಣಮುಕ್ತ ಪತ್ರ ನೀಡಲಾಗಿದೆ. ಒಂದು ವಾರದಲ್ಲಿ 1 ಲಕ್ಷ ರೈತರಿಗೆ ಋಣಮುಕ್ತ ಪತ್ರ ಕೊಡುತ್ತೇವೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗದಷ್ಟು ಪ್ರಧಾನಿ ಅವರ ಅರಿವು ದಿವಾಳಿಯಾಗಿದೆಯೇ’ ಎಂದು ಪ್ರಶ್ನಿಸಿದರು.

‘ಪೆಟ್ರೋಲ್‌ ಹಾಗೂ ಡೀಸೆಲ್‌ನಿಂದ ₹ 10 ಲಕ್ಷ ಕೋಟಿ ಬಂದಿತ್ತು. ಅದರ ಬಗ್ಗೆ ಪ್ರಧಾನಿ ಲೆಕ್ಕ ಕೊಟ್ಟಿಲ್ಲ. ಜತೆಗೆ, ರೈತರ ಸಾಲವನ್ನೂ ಮನ್ನಾ ಮಾಡಿಲ್ಲ. ರಾಜ್ಯದ ಯೋಜನೆ ಬಗ್ಗೆ ಟೀಕೆ ಮಾಡಲು ಅವರಿಗೆ ನೈತಿಕತೆ ಇಲ್ಲ’ ಎಂದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !