ಮಲೆನಾಡಿನ ಕ್ರೀಡಾಕೂಟ ನಾಳೆ

7

ಮಲೆನಾಡಿನ ಕ್ರೀಡಾಕೂಟ ನಾಳೆ

Published:
Updated:

ಬೆಂಗಳೂರು: ಮಲೆನಾಡು ಮಿತ್ರವೃಂದ ವತಿಯಿಂದ ಇದೇ 6ರಂದು ಜಾಲಹಳ್ಳಿಯ ಎಚ್‌ಎಂಟಿ ಕ್ರೀಡಾಂಗಣದಲ್ಲಿ ‘ಮಲೆನಾಡಿನ ಕ್ರೀಡಾಕೂಟ’ವನ್ನು ಆಯೋಜಿಸಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸುಬ್ಬಯ್ಯ ನಂಟೂರು, ‘ಈ ಕ್ರೀಡಾಕೂಟದಲ್ಲಿ ಸಂಪೂರ್ಣ ಗ್ರಾಮೀಣ ಕ್ರೀಡೆಗಳು ಇರಲಿವೆ. 5 ವರ್ಷ ಮೇಲ್ಪಟ್ಟ ಎಲ್ಲ ವಯೋಮಾನದವರೂ ಭಾಗವಹಿಸಬಹುದು. ಒಂದು ಕ್ರೀಡೆಯ ಪ್ರವೇಶ ದರ ₹ 5 ಇರಲಿದೆ’ ಎಂದು ಹೇಳಿದರು.

ಏನೇನಿರಲಿದೆ: ಕೋನ್‌ ರೇಸ್, ಫ್ರಾಗ್‌ ರೇಸ್, ಓಟ, ಏಮಿಂಗ್ ದ ಹೂಪ್ಸ್‌, ಡೇಂಜರ್‌ ಜೋನ್, ಗೋಣಿ ಚೀಲದ ಓಟ, ಗುಂಡು ಎಸೆತ, ಮ್ಯೂಸಿಕಲ್ ಚೇರ್‌, ಥ್ರೋಬಾಲ್, ವಾಲಿಬಾಲ್, ಹಗ್ಗಜಗ್ಗಾಟ, ಬಾಂಬಿಂಗ್‌ ಸಿಟಿ ಸೇರಿದಂತೆ ಹಲವು ಕ್ರೀಡೆಗಳು ನಡೆಯಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !