ವಿಧಾನಸೌಧದಲ್ಲಿ ಹಣ ಪತ್ತೆ ಕುರಿತು ತನಿಖೆಯಾಗಲಿ: ಸಿದ್ದರಾಮಯ್ಯ

7
ಮಹಾಕೂಟ ವೀಕ್ಷಣೆ ವೇಳೆ ಮಕ್ಕಳಿಗೆ ಮೇಷ್ಟ್ರಾದ ಮಾಜಿ ಮುಖ್ಯಮಂತ್ರಿ

ವಿಧಾನಸೌಧದಲ್ಲಿ ಹಣ ಪತ್ತೆ ಕುರಿತು ತನಿಖೆಯಾಗಲಿ: ಸಿದ್ದರಾಮಯ್ಯ

Published:
Updated:

ಬಾಗಲಕೋಟೆ: ‘ವಿಧಾನಸೌಧದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಕೊಠಡಿಯಲ್ಲಿ ಹಣ ಪತ್ತೆ ವಿಚಾರ ನನಗೆ ಗೊತ್ತಿಲ್ಲ. ಆದರೆ ಹಣ ಹೊಂದಿದ್ದ ವ್ಯಕ್ತಿ ಅಲ್ಲಿ ಕೆಲಸ ಮಾಡುತ್ತಿದ್ದರೆ ಅವರನ್ನು ವಜಾಗೊಳಿಸಬೇಕು ಹಾಗೂ ಆ ಬಗ್ಗೆ ತನಿಖೆ ಆಗಬೇಕು’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಬಾದಾಮಿ ಸಮೀಪದ ಬನಶಂಕರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಹಣ ಹೊಂದಿದ್ದ ವ್ಯಕ್ತಿಯ ವಿರುದ್ಧ ಮೊಕದ್ದಮೆ ದಾಖಲು ಮಾಡಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮಕ್ಕಳೊಂದಿಗೆ ಬೆರೆತ ಸಿದ್ದರಾಮಯ್ಯ: ಇಲ್ಲಿನ ಐತಿಹಾಸಿಕ ತಾಣಗಳಾದ ಮಹಾಕೂಟ ಹಾಗೂ ಪಟ್ಟದಕಲ್ಲಿಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಭೇಟಿ ನೀಡಿದ ಸಿದ್ದರಾಮಯ್ಯ, ಅಲ್ಲಿಗೆ ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ಶಾಲಾ ಮಕ್ಕಳೊಂದಿಗೆ ಕೆಲ ಹೊತ್ತು ಕಾಲ ಕಳೆದರು.

ಮಹಾಕೂಟದಲ್ಲಿದ್ದ ಮಕ್ಕಳಿಗೆ ನೀವು ಯಾವ ಮೀಡಿಯಂ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಅದಕ್ಕೆ ಮಕ್ಕಳು ಕನ್ನಡ ಮೀಡಿಯಂ ಎಂದು ಉತ್ತರಿಸಿದರು. ಎಲ್ಲಿಗೆ ಹೊರಟಿರಿ ಎಂದು ಕೇಳಿದಾಗ, ಇಲ್ಲಿಂದ ಧಾರವಾಡದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೊರಟಿದ್ದೀವಿ ಎಂದು ಮಕ್ಕಳು ಪ್ರತಿಕ್ರಿಯಿಸಿದರು. ಈ ಬಾರಿ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದಾರೆ ಎಂಬ ಪ್ರಶ್ನೆಗೆ ಚಂದ್ರಶೇಖರ ಕಂಬಾರ ಎಂದರು.

ಅವರು ಯಾರು ಎಂದು ಮರುಪ್ರಶ್ನೆ ಹಾಕಿದಾಗ, ಅವರೊಬ್ಬ ಸಾಹಿತಿ ಎಂದು ಮಕ್ಕಳು ಉತ್ತರಿಸಿದರು. ಹೀಗೆ ಕೆಲ ಹೊತ್ತು ಮಕ್ಕಳಿಗೆ ಮೇಷ್ಟ್ರಾದ ಸಿದ್ದರಾಮಯ್ಯ ನಂತರ ಅವರೊಂದಿಗೆ ಫೋಟೊಗೆ ಫೋಸ್ ನೀಡಿದರು.

ಬರಹ ಇಷ್ಟವಾಯಿತೆ?

 • 15

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !