ಹಂಪಿ ಮಾದರಿಯಲ್ಲಿ ಬಾದಾಮಿ, ಐಹೊಳೆ ಅಭಿವೃದ್ಧಿ: ₹500 ಕೋಟಿ ಪ್ರಸ್ತಾವ

7

ಹಂಪಿ ಮಾದರಿಯಲ್ಲಿ ಬಾದಾಮಿ, ಐಹೊಳೆ ಅಭಿವೃದ್ಧಿ: ₹500 ಕೋಟಿ ಪ್ರಸ್ತಾವ

Published:
Updated:

ಬಾಗಲಕೋಟೆ: ಹಂಪಿ ಮಾದರಿಯಲ್ಲಿ ಬಾದಾಮಿ, ಐಹೊಳೆ ಹಾಗೂ ಪಟ್ಟದಕಲ್ಲು ಅಭಿವೃದ್ಧಿಗೆ ₹500 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ನೀಡುವಂತೆ ಸೋಮವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಸ್ತಾವ ಸಲ್ಲಿಸಲಿದ್ದೇನೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಇದರಲ್ಲಿ ₹261 ಕೋಟಿ ವೆಚ್ಚದಲ್ಲಿ ಐಹೊಳೆ ಗ್ರಾಮವನ್ನು ಸ್ಥಳಾಂತರಿಸುವ ಯೋಜನೆಯೂ ಒಳಗೊಂಡಿದೆ. ಅದಕ್ಕಾಗಿ 100 ಎಕರೆ ಜಾಗವನ್ನು ಜಿಲ್ಲಾಡಳಿತ ಈಗಾಗಲೇ ಗುರುತಿಸಿದೆ’ ಎಂದು ಹೇಳಿದರು.

‘ಬಾದಾಮಿಯಲ್ಲಿ ಎರಡು ಕಡೆ ಮನೆಗಳ ಸ್ಥಳಾಂತರ, ರಸ್ತೆಗಳ ವಿಸ್ತರಣೆ, ಪಟ್ಟದಕಲ್ಲಿನಲ್ಲಿ ಪ್ರವಾಸೋದ್ಯಮ ಇಲಾಖೆಯ 24 ಎಕರೆ ಜಾಗದಲ್ಲಿ ₹30 ಕೋಟಿ ವೆಚ್ಚದಲ್ಲಿ ಟೂರಿಸಂ ಪ್ಲಾಜಾ ನಿರ್ಮಿಸುವ ಉದ್ದೇಶವಿದೆ. ಜೊತೆಗೆ ಚಾಲುಕ್ಯ ಪ್ರಾಧಿಕಾರಕ್ಕೂ ಚಾಲನೆ ನೀಡಲಾಗುವುದು’ ಎಂದರು.

‘ಹಂಪಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ವರ್ಷದಿಂದ ವರ್ಷಕ್ಕೆ ವಿದೇಶಿಯರ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ. ಆದರೆ ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಅಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !