ಸಮ್ಮೇಳನದಲ್ಲಿ ಕಡಿದಾಳು ಶಾಮಣ್ಣ ಕ್ಲಿಕ್

7

ಸಮ್ಮೇಳನದಲ್ಲಿ ಕಡಿದಾಳು ಶಾಮಣ್ಣ ಕ್ಲಿಕ್

Published:
Updated:
Prajavani

ಧಾರವಾಡ: 84ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ಭೇಟಿ ನೀಡಿದ ಹಿರಿಯ ರೈತ ಮುಖಂಡ ಕಡಿದಾಳು ಶಾಮಣ್ಣ ಎಂದಿನಂತೆ ಕ್ಯಾಮೆರಾ ಹೆಗಲಿಗೇರಿಸಿಕೊಂಡೇ ಬಂದಿದ್ದರು. ಸಮ್ಮೇಳನದ ತುಂಬೆಲ್ಲ ಓಡಾಡಿ ಒಂದಷ್ಟು ಚಿತ್ರಗಳನ್ನು ಸೆರೆಹಿಡಿದು ಸಂಭ್ರಮಿಸಿದರು.

ಅಂಬಿಕಾತನಯದತ್ತ ಪ್ರಧಾನ ವೇದಿಕೆಗೆ ಬಂದ ಶಾಮಣ್ಣ, 1964ರಲ್ಲಿ ತಮ್ಮದೇ ಪ್ರಕಾಶನದಿಂದ ಪ್ರಕಟಿಸಿದ್ದ, ಸಮ್ಮೇಳನದ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರ ಕೃತಿಯೊಂದನ್ನು ಕಂಬಾರರಿಗೆ ನೀಡಿದರು. ಅವರ ಕೈಕುಲುಕಿ ಶುಭಾಶಯ ಹೇಳಿದರು. ಕೆಲಹೊತ್ತು ಅವರೊಂದಿಗೆ ಮಾತನಾಡಿ ಸಭಾಂಗಣದ ಆವರಣಕ್ಕೆ ಬಂದರು.

ನಂತರ ಕ್ಯಾಮೆರಾ ಹೊರತೆಗೆದು ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿದರು. ಕಂಬಾರರ, ಸಮ್ಮೇಳನದ ಸಭಾಂಗಣದಲ್ಲಿದ್ದ ಸಭಿಕರ, ಹೊರಗಿನ ನೋಟ ಹೀಗೆ ಹಲವು ಚಿತ್ರಗಳನ್ನು ಸೆರೆಹಿಡಿದರು. ಒಂದಷ್ಟು ಹೊತ್ತು ಅಲ್ಲಿದ್ದು ಸಾಹಿತಿಗಳೊಡನೆ ಚರ್ಚಿಸಿ ತೆರಳಿದರು.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !