ರಾಜ್ಯಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಕೂಟ: ವಿಜಯಪುರ ಕ್ರೀಡಾಹಾಸ್ಟೆಲ್ ಚಾಂಪಿಯನ್

7

ರಾಜ್ಯಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಕೂಟ: ವಿಜಯಪುರ ಕ್ರೀಡಾಹಾಸ್ಟೆಲ್ ಚಾಂಪಿಯನ್

Published:
Updated:
Prajavani

ಬಾಗಲಕೋಟೆ: ವೈಯಕ್ತಿಕ ಹಾಗೂ ಗುಂಪು ವಿಭಾಗಗಳಲ್ಲಿ ಸೈಕ್ಲಿಸ್ಟ್‌ಗಳು ಪಾರಮ್ಯ ಮೆರೆದ ಪರಿಣಾಮ ಭಾನುವಾರ ಇಲ್ಲಿ ಮುಕ್ತಾಯವಾದ 11ನೇ ರಾಜ್ಯಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ವಿಜಯಪುರದ ಕ್ರೀಡಾ ಹಾಸ್ಟೆಲ್ ಸಮಗ್ರ ಪ್ರಶಸ್ತಿಗೆ ಭಾಜನವಾಯಿತು.

ಇಂಡಿವಿಜ್ಯುವಲ್-ಪರಸೂಟ್, ಸ್ಕ್ರ್ಯಾಚ್ ರೇಸ್, ಪಾಯಿಂಟ್ ರೇಸ್, ಟೀಮ್ ಪರಸೂಟ್ ಹೀಗೆ ಎಲ್ಲ ವಿಭಾಗದಲ್ಲೂ ಸಾಧನೆ ಮೆರೆದ ವಿಜಯಪುರ ಕ್ರೀಡಾ ಹಾಸ್ಟೆಲ್‌ನ ಸೈಕ್ಲಿಸ್ಟ್‌ಗಳು 122 ಅಂಕಗಳನ್ನು ಕಲೆಹಾಕಿದರೆ, ಎರಡನೇ ಸ್ಥಾನ ಪಡೆದ ವಿಜಯಪುರ ಜಿಲ್ಲೆ ತಂಡ 29 ಅಂಕ ಪಡೆಯಿತು.

ಫಲಿತಾಂಶ ವಿವರ:

18 ವರ್ಷದೊಳಗಿನ ಬಾಲಕರ 4 ಕಿ.ಮೀ ಇಂಡಿವಿಜ್ಯುವಲ್-ಪರಸೂಟ್: ಪ್ರಥಮ– ವಿಶ್ವನಾಥ ಗಾಡದ, ವಿಜಯಪುರ ಕ್ರೀಡಾ ಹಾಸ್ಟೆಲ್ , (5:49.78 ನಿಮಿಷ), ದ್ವಿತೀಯ– ಗಣೇಶ ಕುಡಿಗನೂರ, ಗದಗ ಜಿಲ್ಲೆ, (5:56.76 ನಿಮಿಷ), ತೃತೀಯ–ಅಭೀಷೇಕ ಮರನೂರ, ವಿಜಯಪುರ ಕ್ರೀಡಾ ಹಾಸ್ಟೆಲ್ , (6:06.26 ನಿ).

ಪುರುಷರ 4 ಕಿ.ಮೀ ಇಂಡಿವಿಜ್ಯುವಲ್-ಪರಸೂಟ್: 1–ಶಿವಲಿಂಗಪ್ಪ ಯಳಮಲಿ, ವಿಜಯಪುರ ಜಿಲ್ಲೆ, (5:50.08 ನಿಮಿಷ), 2–ನಾಗಪ್ಪ ಮರಡಿ, ಚಂದರಗಿ ಕ್ರೀಡಾ ಶಾಲೆ, (5:51.05 ನಿಮಿಷ), 3–ವಿಶ್ವನಾಥ ಗಾಡದ, ವಿಜಯಪುರ ಕ್ರೀಡಾ ಹಾಸ್ಟೆಲ್, (5:51.69 ನಿಮಿಷ).

18 ವರ್ಷದೊಳಗಿನ ಬಾಲಕಿಯರ 3 ಕಿ.ಮೀ ಇಂಡಿವಿಜ್ಯುವಲ್-ಪರಸೂಟ್: 1–ಕೀರ್ತಿ ರಂಗಸ್ವಾಮಿ, ಬೆಂಗಳೂರು ಜಿಲ್ಲೆ (5:01.68 ನಿಮಿಷ), 2–ಸಾವಿತ್ರಿ ಹೆಬ್ಬಾಳಟ್ಟಿ, ವಿಜಯಪುರ ಕ್ರೀಡಾ ಹಾಸ್ಟೆಲ್ , (5:08.70 ನಿಮಿಷ), 3–ಕಾವೇರಿ ಮುರನಾಳ, ವಿಜಯಪುರ ಕ್ರೀಡಾ ಹಾಸ್ಟೆಲ್ , (5:13.22 ನಿಮಿಷ).

ಮಹಿಳೆಯರ 4 ಕಿ.ಮೀ. ಇಂಡಿವಿಜ್ಯುವಲ್-ಪರಸೂಟ್: 1–ಸಾವಿತ್ರಿ ಹೆಬ್ಬಾಳಟ್ಟಿ, ವಿಜಯಪುರ ಕ್ರೀಡಾ ಹಾಸ್ಟೆಲ್ , (5:11.90 ನಿಮಿಷ).2– ರೇಣುಕಾ ದಂಡಿನ, ಗದಗ ಜಿಲ್ಲೆ, (5:13.88 ನಿಮಿಷ),3– ಸೌಮ್ಯಾ ಅಂತಾಪುರ, ವಿಜಯಪುರ ಕ್ರೀಡಾ ಹಾಸ್ಟೆಲ್ , (5:14.17 ನಿಮಿಷ).

16 ವರ್ಷದೊಳಗಿನ ಬಾಲಕರ 4 ಕಿ.ಮೀ. ಸ್ಕ್ರ್ಯಾಚ್ ರೇಸ್:1– ಲಾಯಪ್ಪ ಮುಧೋಳ ಕ್ರೀಡಾ ನಿಲಯ, ಚಂದರಗಿ  ಕ್ರೀಡಾಶಾಲೆ (07:02.01 ನಿಮಿಷ), 2–ಸಂಗನಗೌಡ ಬಿರಾದಾರ, ಚಂದರಗಿ ಕ್ರೀಡಾ ಶಾಲೆ, 07:03.22 ನಿಮಿಷ, 3– ಅಭಿಷೇಕ ಮರನೂರ, ವಿಜಯಪುರ ಕ್ರೀಡಾ ಹಾಸ್ಟೆಲ್ (07:04.43 ನಿಮಿಷ).

16 ವರ್ಷದೊಳಗಿನ ಬಾಲಕಿಯರ 3 ಕಿ.ಮೀ. ಸ್ಕ್ರ್ಯಾಚ್ ರೇಸ್: 1–ಭಾಗ್ಯಶ್ರೀ ಮಠಪತಿ, ಬಾಗಲಕೋಟೆ ಜಿಲ್ಲೆ, (05:11.91 ನಿಮಿಷ), 2–ಶೈಲಾ ನ್ಯಾಮಗೌಡ, ವಿಜಯಪುರ ಕ್ರೀಡಾ ಹಾಸ್ಟೆಲ್ , (05:15.22 ನಿಮಿಷ), 3– ಭಾವನಾ ಪಾಟೀಲ, ಬಾಗಲಕೋಟೆ ಜಿಲ್ಲೆ, (05:25.43 ನಿಮಿಷ).

18 ವರ್ಷದೊಳಗಿನ ಬಾಲಕರ 5 ಕಿ.ಮೀ ಸ್ಕ್ರ್ಯಾಚ್ ರೇಸ್:1–ಮುತ್ತಪ್ಪ ನವಲಳ್ಳಿ, ವಿಜಯಪುರ ಕ್ರೀಡಾ ಹಾಸ್ಟೆಲ್ , (07:03.38 ನಿಮಿಷ), 2– ಬಸವರಾಜ ಮಡ್ಡಿ, ವಿಜಯಪುರ ಕ್ರೀಡಾ ಹಾಸ್ಟೆಲ್ , (07:04.00 ನಿಮಿಷ), 3–ಮಹಾಂತೇಶ ಮದರಖಂಡಿ, ಬಾಗಲಕೋಟೆ ಜಿಲ್ಲೆ, (07:04.50 ನಿಮಿಷ).

ಮಹಿಳೆಯರ 4 ಕಿ.ಮೀ ಸ್ಕ್ರ್ಯಾಚ್ ರೇಸ್: 1– ಸೌಮ್ಯಾ ಅಂತಾಪುರ, ವಿಜಯಪುರ ಕ್ರೀಡಾ ಹಾಸ್ಟೆಲ್ , (06:41.39 ನಿಮಿಷ), 2– ದಾನಮ್ಮ ಪಾಯಣ್ಣವರ, ವಿಜಯಪುರ ಕ್ರೀಡಾ ಹಾಸ್ಟೆಲ್ , (06:41.46 ನಿಮಿಷ).3– ರೇಣುಕಾ ದಂಡಿನ, ಗದಗ ಜಿಲ್ಲೆ, (06:41.58 ನಿಮಿಷ).

ಪುರುಷರ 6 ಕಿ.ಮೀ. ಸ್ಕ್ರ್ಯಾಚ್ ರೇಸ್: 1– ಪ್ರಶಾಂತ ದೇವಕ್ಕಿ, ವಿಜಯಪುರ ಕ್ರೀಡಾ ಹಾಸ್ಟೆಲ್ , (07:40.00 ನಿಮಿಷ), 2–ಸಂತೋಷ ವಿಭೂತಿಹಳ್ಳಿ, ಗದಗ ಜಿಲ್ಲೆ, (07:40.30 ನಿಮಿಷ), ನಂದೆಪ್ಪ ಸವಡಿ, ವಿಜಯಪುರ ಕ್ರೀಡಾ ಹಾಸ್ಟೆಲ್, (07:40.50 ನಿಮಿಷ).

18 ವರ್ಷದೂಳಗಿನ ಬಾಲಕರ 8 ಕಿ.ಮೀ. ಪಾಯಿಂಟ್ ರೇಸ್: 1–ಮುತ್ತಪ್ಪ ನವಲಳ್ಳಿ, ವಿಜಯಪುರ ಕ್ರೀಡಾ ಹಾಸ್ಟೆಲ್, 2–ಬಸವರಾಜ ಮಡ್ಡಿ, ವಿಜಯಪುರ ಕ್ರೀಡಾ ಹಾಸ್ಟೆಲ್, 3–ಮಹಾಂತೇಶ ಮದರಖಂಡಿ, ಬಾಗಲಕೋಟೆ ಜಿಲ್ಲೆ.

ಪುರುಷರ 4 ಕಿ.ಮೀ ಟೀಮ್ ಪರಸೂಟ್: 1–ವಿಜಯಪುರ ಕ್ರೀಡಾ ಹಾಸ್ಟೆಲ್ ತಂಡ, (05:46.00 ನಿಮಿಷ). ನಾಗರಾಜ ಸೋಮಗೊಂಡ, ಸಚಿನ್ ರಂಜಣಗಿ ಅಭಿಷೇಕ ಮರನೂರ, ಆನಂದ ಮಣ್ಣೂರ, 2–ಬಾಗಲಕೋಟೆ ಜಿಲ್ಲೆ ತಂಡ, (06:06.40 ನಿಮಿಷ), ಬಸವರಾಜ, ಕರೆಯಪ್ಪ ಜನಗಣ್ಣವರ, ಅನಿಲ್ ಮಡ್ಡಿ, ದಾನೇಶ ತೇಲಿ, 3– ಗದಗ ಜಿಲ್ಲೆ ತಂಡ (06:07.28 ನಿಮಿಷ), ಸಂತೋಷ ವಿಭೂತಿಹಳ್ಳಿ, ವಿನೋದ ಪಂಡ್ರಿ, ಗಣೇಶ ಕುಡಿಗನೂರ, ಯುವರಾಜ ಕೊಕಟನೂರ.

ಮಹಿಳೆಯರ 8 ಕಿ.ಮೀ. ಪಾಯಿಂಟ್ ರೇಸ್:1–ಅನಿತಾ ಶಿಂಧೆ, ವಿಜಯಪುರ ಕ್ರೀಡಾ ಹಾಸ್ಟೆಲ್ , 2–ದಾನಮ್ಮ ಪಾಯಣ್ಣವರ, ವಿಜಯಪುರ ಕ್ರೀಡಾ ಹಾಸ್ಟೆಲ್, 3–ಜಿ.ಪ್ರಿಯಾಂಕಾ, ಬೆಂಗಳೂರು ಜಿಲ್ಲೆ.

ಪುರುಷರ 10 ಕಿ.ಮೀ ಪಾಯಿಂಟ್ ರೇಸ್: 1–ಯಲಗುರೇಶ ಗಡ್ಡಿ, ವಿಜಯಪುರ ಜಿಲ್ಲೆ, 2–ಸಂತೋಷ ವಿಭೂತಿಹಳ್ಳಿ. ಗದಗ ಜಿಲ್ಲೆ, 3– ಬಸವರಾಜ, ಬಾಗಲಕೋಟೆ ಜಿಲ್ಲೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !