ರಾಷ್ಟ್ರೀಯ ಅಟ್ಯಾ-ಪಟ್ಯಾ ಚಾಂಪಿಯನ್‌ ಶಿಪ್: ಕರ್ನಾಟಕ-ಪಾಂಡಿಚೇರಿಗೆ ಪ್ರಶಸ್ತಿ

7

ರಾಷ್ಟ್ರೀಯ ಅಟ್ಯಾ-ಪಟ್ಯಾ ಚಾಂಪಿಯನ್‌ ಶಿಪ್: ಕರ್ನಾಟಕ-ಪಾಂಡಿಚೇರಿಗೆ ಪ್ರಶಸ್ತಿ

Published:
Updated:
Prajavani

 ಬಾಗಲಕೋಟೆ: ಸಮೀಪದ ಶಿರೂರಿನಲ್ಲಿ ಭಾನುವಾರ ಮುಕ್ತಾಯವಾದ 33 ನೇ ರಾಷ್ಟ್ರೀಯ ಅಟ್ಯಾ-ಪಟ್ಯಾ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಪಾಂಡಿಚೇರಿ ತಂಡಗಳು ಚಾಂಪಿಯನ್ ಶ್ರೇಯ ಪಡೆದವು.

ಮುಂಜಾನೆ ನಡೆದ ಪುರುಷರ ವಿಭಾಗದ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ಕೇರಳ ತಂಡಗಳ ನಡುವಿನ ರೋಚಕ ಪಂದ್ಯ ಕ್ರೀಡಾಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತ್ತು.

ಮೊದಲ ಸೆಟ್ ಟೈ ಆದರೆ, ಎರಡನೇ ಸೆಟ್‌ನಲ್ಲಿ ಕೇರಳ ಗೆಲುವು ಸಾಧಿಸಿತು. ಛಲ ಬಿಡದ ಕರ್ನಾಟಕದ ಆಟಗಾರರು ಮೂರನೇ ಸೆಟ್‌ ತಮ್ಮದಾಗಿಸಿಕೊಂಡರು. ಇದರಿಂದ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿತು. ನಂತರದ ಐದು ನಿಮಿಷದ ಆಟದಲ್ಲಿ ಕರ್ನಾಟಕದ ಆಟಗಾರರು 10 ಅಂಕ ಪಡೆಯುವ ಮೂಲಕ ಗೆಲುವಿನ ನಗೆ ಬೀರಿದರು.

ಪಾಂಡಿಚೇರಿಗೆ ಗೆಲುವು: ಮಹಿಳೆಯರ ವಿಭಾಗದಲ್ಲಿ ಕಳೆದ ಬಾರಿಯ ಚಾಂಪಿಯನ್ ಪಾಂಡಿಚೇರಿ ತಂಡ ಈ ಬಾರಿಯೂ ಪ್ರಶಸ್ತಿ ಉಳಿಸಿಕೊಂಡಿತು. ಉತ್ತಮವಾಗಿ ಆಡಿದ ಪಾಂಡಿಚೇರಿ ಮಹಿಳೆಯರು ಕೇರಳ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿದರು.

ಇದಕ್ಕೂ ಮುನ್ನ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯಗಳಲ್ಲಿ ಪುರುಷರ ವಿಭಾಗದಲ್ಲಿ ಮಹಾರಾಷ್ಟ್ರ ತಂಡ ಪಾಂಡಿಚೇರಿಯನ್ನು ಹಾಗೂ ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರವನ್ನು ಸೋಲಿಸಿತು.

ಉತ್ತಮ ಆಟಗಾರರು: ಕರ್ನಾಟಕದ ಸಂತೋಷ ನಾಯಕ ಹಾಗೂ ಪಾಂಡಿಚೇರಿಯ ತಿಲಗವದಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಉತ್ತಮ ಆಟಗಾರರು ಪ್ರಶಸ್ತಿ ಪಡೆದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !