ಶ್ವಾನ ಪ್ರದರ್ಶನ ವೀಕ್ಷಣೆಗೆ ಮುಗಿಬಿದ್ದ ಜನ

7

ಶ್ವಾನ ಪ್ರದರ್ಶನ ವೀಕ್ಷಣೆಗೆ ಮುಗಿಬಿದ್ದ ಜನ

Published:
Updated:
Prajavani

ಸಿಂಧನೂರು: ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿರುವ ಎರಡನೇ ರಾಜ್ಯ ಮಟ್ಟದ ಪಶು ಮತ್ತು ಮತ್ಸ್ಯ ಮೇಳದಲ್ಲಿ, ಎರಡನೇ ದಿನ ಭಾನುವಾರ ಶ್ವಾನಗಳ ಪ್ರದರ್ಶನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಪ್ರೀತಿಯ ಶ್ವಾನಗಳನ್ನು ಹಿಡಿದು ಕುಳಿತಿದ್ದ ಶ್ವಾನಗಳ ಮಾಲೀಕರು ತಮ್ಮ ಶ್ವಾನಗಳ ವಿಶೇಷತೆಯನ್ನು ಇಲಾಖೆ ಅಧಿಕಾರಿಗಳಿಗೆ ಮತ್ತು ಸಚಿವರಿಗೆ ಹೇಳಲು ಉತ್ಸುಕರಾಗಿದ್ದರು. 25 ವಿವಿಧ ತಳಿಗಳ 203 ಶ್ವಾನಗಳ ಪ್ರದರ್ಶನವನ್ನು ಜನರೆಲ್ಲ ಕುತೂಹಲದಿಂದ ವೀಕ್ಷಿಸಿದರು.

ಡೋಬರ್‍ಮನ್, ಗ್ರೇಡ್ ಡಾನ್, ಮೈಟ್ರೋಡೈರ್, ರಗ್ಗಾ, ಗೋಡನ್ ರಿಟ್ರಾನ್, ರೋಟ್ ಮೈಟ್ರೋ, ಜೆಸ್ಸಿ, ಹೋಂಡಾ ಡ್ಯಾಶ್ ಸೇರಿದಂತೆ ದೇಶಿಯ ಮತ್ತು ವಿದೇಶಿ ತಳಿಗಳ ಶ್ವಾನಗಳು ನೋಡುಗರನ್ನು ಆಕರ್ಷಿಸಿದವು. ಬೆಂಗಳೂರು, ಹೊಸಪೇಟೆ, ಬಳ್ಳಾರಿ, ಮುಧೋಳ, ಬಿಜಯಪುರ, ಬೀದರ, ಸಿಂಧನೂರು ತಾಲ್ಲೂಕಿನ ಗಾಂಧಿನಗರ, ಗೊರೇಬಾಳ ಮತ್ತಿ ಇತರ ಹಲವಾರು ಪಟ್ಟಣಗಳಿಂದ ಶ್ವಾನಗಳನ್ನು ಪ್ರದರ್ಶನಕ್ಕೆ ಕರೆ ತರಲಾಗಿತ್ತು.

ಶ್ವಾನ ಪ್ರದರ್ಶನವನ್ನು ಉದ್ಘಾಟಿಸಿದ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, ’ಶ್ವಾನವು ಅತ್ಯಂತ ನಿಷ್ಠೆ ಮತ್ತು ಕೃತಜ್ಞತೆಗೆ ಪ್ರತೀಕವಾಗಿದ್ದು, ಮನುಷ್ಯನು ಹಲವಾರು ವರ್ಷಗಳಿಂದ ಸಾಕುತ್ತಾ ಬಂದಿರುವ ಪ್ರಾಣಿಯಾಗಿದೆ. ಅಲ್ಲದೆ ತನ್ನ ಮಾಲೀಕನ ರಕ್ಷಣೆಗಾಗಿ ತನ್ನ ಪ್ರಾಣವನ್ನೆ ಕೊಡುವ ನಿಷ್ಠೆ ಶ್ವಾನಕ್ಕೆ ಮಾತ್ರ ಒಲಿದು ಬಂದಿದೆ. ಆದ್ದರಿಂದ ಹಲವಾರು ಜನರು ವಿಶೇಷವಾಗಿ ಪ್ರಾಣಿಪ್ರಿಯರು ಶ್ವಾನವನ್ನು ಸಾಕುವ ವಾಡಿಕೆಯಿದೆ’ ಎಂದರು.

ಪೊಲೀಸ್‌ ಇಲಾಖೆಯ ಶ್ವಾನದಳದವರು ನಡೆಸಿದ ಪ್ರದರ್ಶನ ವಿಶೇಷವಾಗಿತ್ತು. ಶ್ವಾನವು ನಮಸ್ಕಾರ ಮಾಡಿದ್ದು, ಕುಳಿತುಕೊಳ್ಳಲು, ನಿಲ್ಲಲು, ಕಳ್ಳರನ್ನು ಹಿಡಿಯಲು ಆದೇಶ ನೀಡಿದರೆ ಅದರಂತೆ ಪಾಲಿಸುವ ಪ್ರಾತ್ಯಕ್ಷಿತೆಯನ್ನು ತೋರಿಸಲಾಯಿತು. ಹಲವು ಶ್ವಾನಗಳು ಸಚಿವರಿಗೆ ಥ್ಯಾಂಕ್ಸ್ ಕೊಡುವ ಸನ್ನಿವೇಶ ನೋಡುಗರನ್ನು ಅಚ್ಚರಿಗೊಳಿಸಿತು.

ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಮುಖ್ಯಕಾರ್ಯದರ್ಶಿ ಮಂಜುನಾಥ ನಾಯಕ, ಮುಖ್ಯ ಆಯುಕ್ತ ಯು.ಪಿ.ಸಿಂಗ್, ಮೀನುಗಾರಿಕೆ ಇಲಾಖೆಯ ನಿರ್ದೇಶಕ ರಾಮಕೃಷ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !