ಕೂಡಲಸಂಗಮ: ಜನವರಿ 11ರಿಂದ ಶರಣಮೇಳ

7

ಕೂಡಲಸಂಗಮ: ಜನವರಿ 11ರಿಂದ ಶರಣಮೇಳ

Published:
Updated:

ಬಾಗಲಕೋಟೆ: ‘ಕೂಡಲಸಂಗಮದಲ್ಲಿ ಜನವರಿ 11ರಿಂದ 14ರವರೆಗೆ ನಾಲ್ಕು ದಿನಗಳ ಕಾಲ ಶರಣಮೇಳ ಆಯೋಜಿಸಲಾಗಿದೆ’ ಎಂದು ಬಸವಧರ್ಮಪೀಠದ ಕಾರ್ಯದರ್ಶಿ ಮಹಾದೇಶ್ವರ ಸ್ವಾಮೀಜಿ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸತತ 32ನೇ ವರ್ಷ ಆಯೋಜಿಸಲಾಗುತ್ತಿರುವ ಮೇಳದ ಮೊದಲ ದಿನ ಕಾಲಜ್ಞಾನ ಹಾಗೂ ಮಹಿಳಾ ಸ್ವಾತಂತ್ರ್ಯದ ಬಗ್ಗೆ ಗೋಷ್ಠಿ ನಡೆಯಲಿವೆ. ಜನವರಿ 12ರಂದು ರಾಷ್ಟ್ರೀಯ ಬಸವದಳದ 32ನೇ ಅಧಿವೇಶನ ನಡೆಯಲಿದೆ. ಸಂಜೆ 6.30ಕ್ಕೆ ಲಿಂಗಾಯತ ಧರ್ಮ ಹೋರಾಟದ ಮುಂದಿನ ನಡೆಯ ಬಗ್ಗೆ ಯುವಜನ ಗೋಷ್ಠಿ ನಡೆಯಲಿದೆ ಎಂದು ತಿಳಿಸಿದರು.

‘ಜನವರಿ 13ರಂದು ಶರಣಮೇಳವನ್ನು ಗೃಹ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಲಿದ್ದಾರೆ. ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರು ಸಾನ್ನಿಧ್ಯ ವಹಿಸಲಿದ್ದಾರೆ. ಜನವರಿ 14ರಂದು ವಚನ ಪಠಣದ ಉದ್ಘಾಟನೆಯನ್ನು ಶಾಸಕ ಕೆ.ಎಸ್.ಈಶ್ವರಪ್ಪ ಮಾಡಲಿದ್ದಾರೆ. ಬಸವಧರ್ಮ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ ಸಾನ್ನಿಧ್ಯ ವಹಿಸಲಿದ್ದಾರೆ’ ಎಂದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !