ಶರಣಮೇಳಕ್ಕೆ ಸಿದ್ಧತೆ ಪೂರ್ಣ

7
ಡಾ.ಕೆರೂಡಿಗೆ ಸೇರಿ ಐವರಿಗೆ ಪ್ರಶಸ್ತಿ ಪ್ರದಾನ: ಮಹಾದೇಶ್ವರ ಸ್ವಾಮೀಜಿ

ಶರಣಮೇಳಕ್ಕೆ ಸಿದ್ಧತೆ ಪೂರ್ಣ

Published:
Updated:
Prajavani

ಬಾಗಲಕೋಟೆ: ಕೂಡಲಸಂಗಮದ ಬಸವಧರ್ಮ ಪೀಠದ ಶರಣ ಕಾಯಕ ಪ್ರಶಸ್ತಿಗೆ ಬಾಗಲಕೋಟೆ ಖ್ಯಾತ ವೈದ್ಯ ಡಾ.ಬಸವರಾಜ ಕೆರೂಡಿ, ವಿಜಯಪುರದ ಮಲ್ಲಿಕಾರ್ಜುನ ಫಲದಿನ್ನಿ ಆಯ್ಕೆಯಾಗಿದ್ದಾರೆ ಎಂದು ಪೀಠದ ಕಾರ್ಯದರ್ಶಿ ಮಹಾದೇಶ್ವರ ಸ್ವಾಮೀಜಿ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶರಣ ದಾಸೋಹ ಪ್ರಶಸ್ತಿಗೆ ಬೆಂಗಳೂರಿನ ಭದ್ರತಾ ಅಧಿಕಾರಿ ಕ್ಯಾಪ್ಟನ್ ವಿಶ್ವನಾಥ, ಶರಣ ಸೇವಾರತ್ನ ಪ್ರಶಸ್ತಿಗೆ ಕೂಡಲಸಂಗಮದ ಪತ್ರಕರ್ತ ಶ್ರೀಧರಗೌಡರ, ಬೆಂಗಳೂರಿನ ಕೆ.ಆರ್.ಜಗದೀಶ ಭಾಜನರಾಗಿದ್ದಾರೆ. ಜನವರಿ 11ರಿಂದ 14ರವರೆಗೆ ನಡೆಯಲಿರುವ 32ನೇ ಶರಣ ಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಕೂಡಲಸಂಗಮದ ಬಸವಧರ್ಮ ಪೀಠದಲ್ಲಿ ನಿರ್ಮಿಸಿರುವ ಅಕ್ಕನಾಗಲಾಂಬಿಕಾ ಮಹಾದ್ವಾರದ ಲೋಕಾರ್ಪಣೆ ಕೂಡ ಇದೇ ವೇಳೆ ನಡೆಯಲಿದೆ. ಶರಣ ಮೇಳದಲ್ಲಿ ಅತಿಥಿಗಳಾಗಿ ಪ್ರವಚನಕಾರ ಈಶ್ವರ ಮಂಟೂರ, ಬಸವ ಕಲ್ಯಾಣದ ಶಾಸಕ ಬಿ.ನಾರಾಯಣ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಬೈಲಹೊಂಗಲದ ಮಾಜಿ ಶಾಸಕ ವಿ.ಬಿ.ಪಾಟೀಲ,  ಡಿಡಿಪಿಐ ಎಂ.ಆರ್.ಕಾಮಾಕ್ಷಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಶಿಧರ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುನಾಥ ಹೂಗಾರ ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಸವಧರ್ಮ ಪೀಠದ ಎಸ್.ಎಸ್.ಅಂಗಡಿ, ಎಂ.ಆರ್.ಹುಲ್ಲಳ್ಳಿ, ಮಲ್ಲಿಕಾರ್ಜುನ ಶಿವನಗೌಡ ಪಲದಿನ್ನಿ, ಬಸವರಾಜ ಆಣೆ, ಚಂದ್ರಕಾಂತ ಲುಕ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !