ಪೊಲೀಸ್‌ ಚೌಕಿ ಉದ್ಘಾಟನೆ

7

ಪೊಲೀಸ್‌ ಚೌಕಿ ಉದ್ಘಾಟನೆ

Published:
Updated:
Prajavani

ಕೋಲಾರ: ನಗರದ ಮೆಕ್ಕೆ ವೃತ್ತದಲ್ಲಿ ಸಿಎಂಆರ್‌ ಟೊಮೆಟೊ ಮಂಡಿ ವತಿಯಿಂದ ನಿರ್ಮಿಸಿದ್ದ ಪೊಲೀಸ್‌ ಚೌಕಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್‌ ಸೋಮವಾರ ಉದ್ಘಾಟಿಸಿದರು.

‘ಇಲಾಖೆ ಸಿಬ್ಬಂದಿಯ ಹಿತದೃಷ್ಟಿಯಿಂದ ಸಿಎಂಆರ್ ಮಂಡಿ ಮಾಲೀಕರು ಪೊಲೀಸ್‌ ಚೌಕಿ ನಿರ್ಮಿಸಿರುವುದು ಶ್ಲಾಘನೀಯ. ಇವರ ಸೇವಾ ಮನೋಭಾವ ಇತತರಿಗೆ ಮಾದರಿಯಾಗಬೇಕು’ ಎಂದು ರೋಹಿಣಿ ಕಟೋಚ್‌ ಸೆಪಟ್‌ ಹೇಳಿದರು.

‘ಪೊಲೀಸರು ಸಮಾಜದಲ್ಲಿನ ಪ್ರತಿಯೊಬ್ಬರನ್ನು ರಕ್ಷಣೆ ಮಾಡುತ್ತಾರೆ. ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಸಣ್ಣ ಕೊಡುಗೆಯಾಗಿ ಚೌಕಿ ನಿರ್ಮಿಸಿ ಕೊಟ್ಟಿದ್ದೇವೆ’ ಎಂದು ಸಿಎಂಆರ್‌ ಮಂಡಿ ಮಾಲೀಕ ಶ್ರೀನಾಥ್ ತಿಳಿಸಿದರು.

‘₹ 3 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸಿರುವ ಪೊಲೀಸ್ ಚೌಕಿಯಲ್ಲಿ ಧ್ವನಿವರ್ಧಕ ಅಳವಡಿಸಲಾಗಿದ್ದು, ಸಂಚಾರ ನಿಯಮಕ್ಕೆ ಸಂಬಂಧಿಸಿದ ಸೂಚನೆಗಳನ್ನು ಧ್ವನಿಮುದ್ರಿಕದ ಮೂಲಕ ತಿಳಿಸಲಾಗುತ್ತದೆ. ಇದರಿಂದ ಅನಕ್ಷರಸ್ಥರು ಸಹ ಸಂಚಾರ ನಿಯಮ ಪಾಲಿಸಲು ಅನುಕೂಲವಾಗಲಿದೆ. ಚೌಕಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯು ಸಂಚಾರ ನಿಯಮ ಉಲ್ಲಂಘಿಸುವ ಸವಾರರಿಗೆ ಧ್ವನಿವರ್ಧಕದ ಮೂಲಕ ಎಚ್ಚರಿಕೆ ನೀಡುತ್ತಾರೆ’ ಎಂದರು.

ಶ್ರೀನಾಥ್ ಅವರನ್ನು ಪೊಲೀಸ್ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಜೇಂದ್ರಕುಮಾರ್, ನಗರ ಠಾಣೆ ಇನ್‌ಸ್ಪೆಕ್ಟರ್‌ ಫಾರೂಕ್‌, ಎಸ್‌ಐ ಅಣ್ಣಯ್ಯ, ಗಲ್‌ಪೇಟೆ ಠಾಣೆ ಎಸ್‍ಐ ಪ್ರದೀಪ್‌ಸಿಂಗ್‌, ಸಂಚಾರ ಠಾಣೆ ಎಸ್‌ಐ ಶ್ರೀನಿವಾಸ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !