ಮಂಡ್ಯ: ಜೆಡಿಎಸ್‌ ಮುಖಂಡನಿಗೆ ಬೆದರಿಕೆ ಪತ್ರ

7

ಮಂಡ್ಯ: ಜೆಡಿಎಸ್‌ ಮುಖಂಡನಿಗೆ ಬೆದರಿಕೆ ಪತ್ರ

Published:
Updated:

ಮಂಡ್ಯ: ಜೆಡಿಎಸ್‌ ಮುಖಂಡ ತೊಪ್ಪನಹಳ್ಳಿ ಪ್ರಕಾಶ್‌ ಹತ್ಯೆಯ ನೆನಪು ಮಾಸುವ ಮುನ್ನವೇ ಮತ್ತೊಬ್ಬ ಜೆಡಿಎಸ್‌ ಮುಖಂಡನಿಗೆ ಕೊಲೆ ಬೆದರಿಕೆ ಬಂದಿದೆ. ಈ ಕುರಿತು ಅವರು ದೂರು ದಾಖಲು ಮಾಡಿದ್ದು ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ.

ಭಾರತೀನಗರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೆಂಕಟೇಶ್‌ ಅವರ ಮನೆಯ ವಿಳಾಸಕ್ಕೆ ಸೋಮವಾರ ಪತ್ರ ಬಂದಿದೆ. ಒಂದು ಸಾಲಿನಲ್ಲಿ ‘ನಿನ್ನ ಕೊಲೆ ತಕ್ಷಣದಲ್ಲೇ‘ ಎಂದು ಬೆದರಿಕೆ ಹಾಕಿದ್ದಾರೆ. ಆತಂಕಕ್ಕೆ ಒಳಗಾಗಿರುವ ವೆಂಕಟೇಶ್‌ ಭಾರತೀನಗರ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದು ಭದ್ರತೆಗೆ ಮನವಿ ಮಾಡಿದ್ದಾರೆ. ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಆಪ್ತರೂ ಆಗಿರುವ ವೆಂಕಟೇಶ್‌ ಸಚಿವರ ಗಮನಕ್ಕೂ ತಂದಿದ್ದಾರೆ. ಸೂಕ್ತ ಭದ್ರತೆ ಒದಗಿಸುವಂತೆ ತಮ್ಮಣ್ಣ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಡಿ.24ರಂದು ಮದ್ದೂರು ಪಟ್ಟಣದಲ್ಲಿ ಹಾಡಹಗಲೇ ಜೆಡಿಎಸ್‌ ಮುಖಂಡ ತೊಪ್ಪನಹಳ್ಳಿ ಪ್ರಕಾಶ್‌ ಅವರನ್ನು ಕೊಚ್ಚಿ ಕೊಲೆ ಮಾಡಲಾಗಿತ್ತು. ಘಟನೆ ಸಂಬಂಧ ತೊಪ್ಪನಹಳ್ಳಿ ಗ್ರಾಮದಲ್ಲಿ ಈಗಲೂ ಉದ್ವಿಗ್ನ ವಾತಾವರಣವಿದೆ. ಪೊಲೀಸರು ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದಾರೆ. ಘಟನೆ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !