ಫೆ.28ರಂದು ಸಾಮೂಹಿಕ ವಿವಾಹ ಮಹೋತ್ಸವ

7

ಫೆ.28ರಂದು ಸಾಮೂಹಿಕ ವಿವಾಹ ಮಹೋತ್ಸವ

Published:
Updated:

ಕೋಲಾರ: ‘ಸಂಘಟನೆಯು ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಫೆ.28ರಂದು 70 ಜೋಡಿಗಳ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಂಡಿದೆ’ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಜಿಲ್ಲಾ ಘಟಕದ ಅಧ್ಯಕ್ಷ ಶೇಕ್ ಅಶ್ರತ್‌ ಅಲಿ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವಿವಾಹ ಮಹೋತ್ಸವದಲ್ಲಿ ಯಾವುದೇ ಧರ್ಮ, ಸಮುದಾಯದವರು ಪಾಲ್ಗೊಳ್ಳಬಹುದು. ಹೆಸರು ನೋಂದಣಿಗೆ ಜ.20 ಕಡೆಯ ದಿನ. ವಿವಾಹಕ್ಕೆ ಆಯಾ ಸಮುದಾಯದ ಸಂಘಟನೆಯಿಂದ ನಿರಾಕ್ಷೇಪಣಾ ಪತ್ರ ತರಬೇಕು’ ಎಂದರು.

‘ವಿವಾಹಕ್ಕೆ ನೋಂದಣಿ ಮಾಡಿಸುವವರು ಸರ್ಕಾರದ ನಿಯಮಾವಳಿ ಪಾಲಿಸಬೇಕು. ವಯಸ್ಸಿನ ದೃಢೀಕರಣ ಪತ್ರ, ಭಾವಚಿತ್ರ ಸಲ್ಲಿಸಬೇಕು. ಹಿಂದಿನ ವರ್ಷ ಡಿ.9ರಂದು ಬಂಗಾರಪೇಟೆಯಲ್ಲಿ 16 ಜೋಡಿಗಳ ವಿವಾಹ ಮಾಡಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ಯಕ್ರಮಕ್ಕೆ ಆರ್ಥಿಕ ನೆರವು ನೀಡಲು ದಾನಿಗಳು ಮುಂದೆ ಬಂದಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಆಯಾ ಸಮದಾಯದ ಪದ್ಧತಿ ಪ್ರಕಾರ ವಿವಾಹ ನಡೆಸಲಾಗುವುದು. ಜತೆಗೆ ನವ ಜೋಡಿಯ ಕುಟುಂಬದ 50 ಮಂದಿಗೆ ಊಟದ ವ್ಯವಸ್ಥೆ ಮಾಡುತ್ತೇವೆ. ವಿವಾಹಿತರಿಗೆ ಹಾಸಿಗೆ, ಅಲ್ಮೇರಾ, ಪಾತ್ರೆ ಸೇರಿದಂತೆ 40 ವಸ್ತುಗಳನ್ನು ಉಚಿತವಾಗಿ ಕೊಡುತ್ತೇವೆ. ವಿವಾಹಕ್ಕೆ ಬರಲು ಕುಟುಂಬಕ್ಕೆ ಪ್ರಯಾಣ ವೆಚ್ಚವಾಗಿ ₹ 5 ಸಾವಿರ ನೀಡುತ್ತೇವೆ. ಆಸಕ್ತರು ಹೆಚ್ಚಿನ ಮಾಹಿತಿಗೆ 9449266377 ಅಥವಾ 9980159709 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು’ ಎಂದು ವಿವರಿಸಿದರು.

ಐಯುಎಂಎಲ್ ಸಂಘಟನೆ ಸದಸ್ಯರಾದ ವಜೀದ್‌ ಖಾನ್, ಅಬ್ದುಲ್ ರಶೀದ್, ಚಾಂದ್‌ ಪಾಷಾ, ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಸದಸ್ಯ ಎಂ.ಸುನಿಲ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !